ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ : ವನ್ಯಜೀವಿಗಳ ಚರ್ಮ, ಹಲ್ಲುಗಳ ಅಕ್ರಮ ಮಾರಾಟ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್

ಕೋಲಾರ : ಕೋಲಾರ ಗ್ರಾಮಾಂತರ ಪೋಲೀಸರು ಹಾಗೂ ಸೈಬರ್ ಕ್ರೈಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಜಿಂಕೆ ಚರ್ಮ, ಜಿಂಕೆ ಕೊಂಬುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಾಲು ಸಮೇತ ಬಂಗಾರಪೇಟೆ ನಿವಾಸಿಯಾದ ಕಿಶೋರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.‌

ಕೋಲಾರ‌ ತಾಲ್ಲೂಕಿನ ಬಂಗಾರಪೇಟೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ದಿಂಬ ಗೇಟ್ ನ ಬಸ್ ನಿಲ್ದಾಣದ ಬಳಿ ಅನುಮಾಸ್ಪದವಾಗಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿದ ವೇಳೆ ಚೀಲದಲ್ಲಿ ಜೆಂಕೆ ಚರ್ಮ ಹಾಗೂ ಎರಡು ಕೊಂಬುಗಳು ಕಂಡು ಬಂದಿದ್ದು, ಕೂಡಲೇ ಕಿಶೋರ್ ಕುಮಾರ ನನ್ನು ಬಂದಿಸಿ ಹೆಚ್ಚಿನ ತನಿಖೆ ನಡೆಸಿದ ವೇಳೆ ತನ್ನ ವಾಸದ ಮನೆಯಲ್ಲಿ ಹೆಚ್ಚಿನ ವನ್ಯ ಜೀವಿಗಳ ಚರ್ಮ ಇರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಬಂಧಿತನ ಮನೆಯನ್ನು ತೀವ್ರವಾಗಿ ಶೋಧಿಸಿದಾಗ ಚುಕ್ಕೆ ಜಿಂಕೆಯ ಮೂರು ಚರ್ಮಗಳು, ನಾಲ್ಕು ಕಡಲ ಶಂಕು, ಹುಲಿಯ ಚರ್ಮದಂತೆ ಕಾಣಲು ಬಣ್ಣ ಬಳೆದಿರುವ ಕಾಡು ಬೆಕ್ಕಿನ ಚರ್ಮ, ಎರಡು ನರಿಯ ಚರ್ಮ, ಚಿರತೆಯ ಎರಡು ಹಲ್ಲುಗಳು ಹಾಗೂ ಕಾಡು ಹಂದಿಯ ನಾಲ್ಕು ಹಲ್ಲುಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Edited By : Abhishek Kamoji
Kshetra Samachara

Kshetra Samachara

16/10/2024 07:36 pm

Cinque Terre

680

Cinque Terre

0

ಸಂಬಂಧಿತ ಸುದ್ದಿ