ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಲೂರು: ಮಗುವಿಗೆ ಬೆಂಕಿಯಿಂದ ಸುಟ್ಟ ಅಂಗನವಾಡಿ ಸಹಾಯಕಿ

ಮಾಲೂರು: ಪ್ರಪಂಚದ ಅರಿವೇ ಇಲ್ಲದ ಮುಗ್ಧ ಮಗುವಿಗೆ ಅಂಗನವಾಡಿ ಸಹಾಯಕಿ ರಾಕ್ಷಸಿಯಂತೆ ಬೆಂಕಿಯಿಂದ ಸುಟ್ಟಿರುವ ಅಮಾನವೀಯ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಈ ಕೃತ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಸಂತೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿಡಘಟ್ಟ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಕಿರುಕುಳ ನೀಡಿ ಬೆಂಕಿಯಿಂದ ಸುಟ್ಟಿರುವ ಅಮಾನವೀಯ ಕೃತ್ಯ ನಡೆದಿದೆ. ಅಂಗನವಾಡಿ ಸಹಾಯಕಿ ಶ್ರೀದೇವಿ ಪ್ರಪಂಚದ ಅರಿವೇ ಇಲ್ಲದ ಮುಗ್ಧ ಮಗುವಿಗೆ ಬೆಂಕಿಯಿಂದ ಸುಡುವ ಮೂಲಕ ರಾಕ್ಷಸಿಯಂತೆ ವರ್ತಿಸಿದ್ದಾರೆ.

ನಿಡಘಟ್ಟ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ೧೭ ಕ್ಕೂ ಹೆಚ್ಚು ಮಕ್ಕಳನ್ನ ಪೋಷಣೆ ಮಾಡುತ್ತಿದ್ದು ಮುನಿರಾಜು ಹಾಗೂ ಮುನಿಯಮ್ಮ ಅವರ ನಾಲ್ಕು ವರ್ಷದ ಹೆಣ್ಣು ಮಗುವಿನ ಕೈ ಮತ್ತು ಕುತ್ತಿಗೆ ಎದೆಯ ಭಾಗದಲ್ಲಿ ಬೆಂಕಿಯಿಂದ ಸುಟ್ಟ ಗಾಯಗಳಾಗಿದ್ದು ಅಂಗನವಾಡಿ ಸಹಾಯಕಿ ರಾಕ್ಷಸಿಯಂತೆ ವರ್ತಿಸಿ ಅಮಾನವೀಯ ಕೃತ್ಯವನ್ನು ಎಸಗಿದ್ದಾರೆ

ಈ ಹಿಂದೆಯು ಸಹ ಅಂಗನವಾಡಿ ಸಹಾಯಕಿ ಶ್ರೀದೇವಿ ಈ ಮಗುವಿಗೆ ಕಾಲಿನ ಮೇಲೆ ಸುಟ್ಟಿದ್ದು ಊರಿನ ಗ್ರಾಮಸ್ಥರು ಅಂಗನವಾಡಿ ಸಹಾಯಕಿಗೆ ಬುದ್ಧಿ ಹೇಳಿದ್ದರೂ ಸಹ ನಮ್ಮ ಮಗುವನ್ನೆ ಗುರಿಯಾಗಿಟ್ಟುಕೊಂಡು ಎರಡನೇ ಬಾರಿಗೆ ಕೃತ್ಯವನ್ನು ಎಸಗುತ್ತಿದ್ದು ಮಗುವನ್ನು ಅಂಗನವಾಡಿಗೆ ಕಳುಹಿಸಲು ಪೋಷಕರು ಭಯ ಪಡುತ್ತಿದ್ದಾರೆ.

Edited By : Nagesh Gaonkar
PublicNext

PublicNext

19/10/2024 10:41 pm

Cinque Terre

43.18 K

Cinque Terre

3

ಸಂಬಂಧಿತ ಸುದ್ದಿ