ದುಬೈ:ಜೆಬೆಲ್ ಅಲಿ ಪ್ರದೇಶದಲ್ಲಿ ಒಂದು ಬೃಹತ್ ಹಿಂದೂ ದೇವಸ್ಥಾನ ನಿರ್ಮಾಣಗೊಳ್ಳುತ್ತಿದೆ. ಈಗ ಇದು ಕೊನೆ ಹಂತಕ್ಕೆ ಬಂದು ತಲುಪಿದೆ. ಈ ದೇವಸ್ಥಾನದ ಒಳಾಂಗಣದ ಫೋಟೋಗಳು ಈಗ ಸಾಕಷ್ಟು ಗಮನ ಸೆಳೆಯುತ್ತಿವೆ.
ದುಬೈನ ಈ ದೇವಸ್ಥಾನ ವಿಶೇಷವಾಗಿಯೇ ಇದೆ. 16 ದೇವರುಗಳ ಈ ದೇವಸ್ಥಾನದಲ್ಲಿ ಜ್ಞಾನದ ಕೊಠಡಿ, ಸಮುದಾಯ ಕೇಂದ್ರ ಇದ್ದು, ಎಲ್ಲ ಧರ್ಮವರಿಗೂ ಆಹ್ಲಾದಕರ ವಾತಾವರಣವೇ ಇಲ್ಲಿ ಇರಲಿದೆ.
ಅಕ್ಟೋಬರ್-05 ರಂದು ಈ ದೇವಸ್ಥಾನ ಉದ್ಘಾಟನೆಗೊಳ್ಳುತ್ತಿದೆ ಆ ಬಳಿಕ ದಸರಾ ಹಬ್ಬ ಉತ್ಸವದೊಂದಿಗೆ ಸಾರ್ವಜನಿಕರಿಗೂ ದೇವಸ್ಥಾನದ ಪ್ರವೇಶದ ಅವಕಾಶ ಇರುತ್ತದೆ.
PublicNext
09/08/2022 05:40 pm