ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಕೆ ನಾಯಕತ್ವ ಸ್ಪರ್ಧೆ : ಮೊದಲ ಸುತ್ತಿನ ಮತದಾನದಲ್ಲಿ ಅಗ್ರಸ್ಥಾನದಲ್ಲಿ ರಿಷಿ ಸುನಕ್

ಯುಕೆ ನಾಯಕತ್ವ ಸ್ಪರ್ಧೆ : ಮೊದಲ ಸುತ್ತಿನ ಮತದಾನದಲ್ಲಿ ಅಗ್ರಸ್ಥಾನದಲ್ಲಿ ರಿಷಿ ಸುನಕ್

ಲಂಡನ್ : ಕನ್ಸರ್ವೇಟಿವ್ ಪಕ್ಷದ ನಾಯಕ ಬೋರಿಸ್ ಜಾನ್ಸನ್ ಅವರ ನಂತರ ಯುಕೆ ನಾಯಕತ್ವ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಬ್ರಿಟನ್ ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಮೊದಲ ಸುತ್ತಿನ ಮತದಾನದಲ್ಲಿ ಹೆಚ್ಚು ಮತಗಳಿಸಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

ರಿಷಿ ಸುನಕ್ 88 ಮತಗಳನ್ನು ಗಳಿಸಿದ್ದು, ಪೆನ್ನಿ ಮೊರ್ಡಾಂಟ್ (67 ಮತಗಳು) ಮತ್ತು ಟ್ರಸ್ ಲಿಜ್ (50 ಮತಗಳು) ಅವರನ್ನು ಹಿಂದಿಕ್ಕಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಹಣಕಾಸು ಸಚಿವ ನಾದಿಮ್ ಜಹಾವಿ ಮತ್ತು ಮಾಜಿ ಕ್ಯಾಬಿನೆಟ್ ಸಚಿವ ಜೆರೆಮಿ ಹಂಟ್ ಅವರನ್ನು ಉಚ್ಚಾಟಿಸಲಾಗಿದೆ.

ಚುನಾವಣಾ ವೇಳಾಪಟ್ಟಿಯ ಪ್ರಕಾರ, ಕನ್ಸರ್ವೇಟಿವ್ ನಾಯಕರಾಗಿ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯನ್ನು ಸೆಪ್ಟೆಂಬರ್ 5 ರಂದು ಘೋಷಿಸಲಾಗುವುದು.

Edited By : Nirmala Aralikatti
PublicNext

PublicNext

13/07/2022 10:32 pm

Cinque Terre

23.8 K

Cinque Terre

0

ಸಂಬಂಧಿತ ಸುದ್ದಿ