ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಭಾರತೀಯ-ಅಮೆರಿಕದ ಕಾನೂನು ತಜ್ಞೆ ಅಂಜಲಿ ಚತುರ್ವೇದಿ ಅವರನ್ನು ಹಿರಿಯ ನಾಗರಿಕರ ಆರೋಗ್ಯ ಸೇವೆ ಇಲಾಖೆಯ ಪ್ರಧಾನ ವಕೀಲರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ.
ಶ್ವೇತಭವನದ ವೆಬ್‌ಸೈಟ್ ಪ್ರಕಾರ ಅಂಜಲಿ ಅವರು ಸದ್ಯ ಅಮೆರಿಕದ ನ್ಯಾಯ ಇಲಾಖೆಯ ಅಪರಾಧ ವಿಭಾಗದಲ್ಲಿ ಉಪ ಸಹಾಯಕ ಅಟಾರ್ನಿ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಅವರು ಅಮೆರಿಕದ ಹಿರಿಯ ನಾಗರಿಕರ ಆರೋಗ್ಯ ಸೇವೆ ಇಲಾಖೆಯ ಪ್ರಧಾನ ವಕೀಲರಾಗಿ ನಾಮ ನಿರ್ದೇಶನಗೊಂಡಿದ್ದಾರೆ. ಇದರೊಂದಿಗೆ ಅಧ್ಯಕ್ಷ ಬೈಡನ್ ಸರ್ಕಾರದಲ್ಲಿ ಭಾರತೀಯ ಮೂಲದ ನಾಲ್ವರು ಭಾರತೀಯ ಸಂಜಾತರು ಉನ್ನತ ಹುದ್ದೆಗಳನ್ನು ಪಡೆದಂತಾಗಿದೆ.
PublicNext
23/06/2022 06:03 pm