ಅಫ್ಘಾನಿಸ್ತಾನ್: ತಾಲಿಬಾನ್ ಸರ್ಕಾರ ದಿನಕ್ಕೊಂದು ನಿರ್ಬಂಧವನ್ನ ಮಹಿಳೆ ಮೇಲೆ ಹೇರ್ತಾನೇ ಇದೆ. ಈಗ ಟಿವಿ ನಿರೂಪಕಿಯರು ಬುರ್ಕಾ ಧರಿಸಿಯೇ ನಿರೂಪಣೆ ಮಾಡಬೇಕು ಅಂತಲೇ ಹೇಳಿದೆ. ಇದನ್ನ ವಿರೋಧಿಸಿದ ಪುರುಷ ನಿರೂಪಕರು ಮಾಸ್ಕ್ ಧರಿಸಿಯೇ ನಿರೂಪಣೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲಿಬಾನ ಮುಖ್ಯಸ್ಥರು ಕೆಲ ದಿನಗಳ ಹಿಂದೆ ಮಹಿಳೆಯರು ಸಾರ್ವಜನಿಕವಾಗಿ ಓಡಾಡೋವಾಗ ಬುರ್ಕಾ ಧರಿಸಲೇಬೇಕು ಅಂತ ಆದೇಶ ಹೊರಡಿಸಿದ್ದರು.
ಈ ಆದೇಶವನ್ನ ಟಿವಿ ನಿರೂಪಕಿಯರೂ ಪಾಲಿಸಲೇಬೇಕು ಅಂತಲೂ ಹೇಳಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು,ಪುರುಷ ನಿರೂಪಕರು ಮಾಸ್ಕ್ ಧರಿಸಿಯೇ ನಿರೂಪನೆ ಮಾಡಿ ಸಿಟ್ಟು ಹೊರಹಾಕಿದ್ದಾರೆ.
PublicNext
24/05/2022 10:49 am