ಉಕ್ರೇನ್: ರಷ್ಯಾ ದಾಳಿಗೆ ಉಕ್ರೇನ್ ಅಕ್ಷರಶಃ ತತ್ತರಿಸಿ ಹೋಗಿದೆ. ಮಕ್ಕಳು-ವೃದ್ಧರು-ಪುರುಷರು ಎಲ್ಲರೂ ಬಲಿ ಆಗುತ್ತಿದ್ದಾರೆ. ರಷ್ಯಾದ ಶೆಲ್ ದಾಳಿಗೆ ಉಕ್ರೇನ್ ಕಿರಿಯ ಸಂಸದನ ಗೆಳತಿ ಕೂಡ ಸತ್ತು ಹೋಗಿದ್ದಾಳೆ. ಆ ನೋವಿನಲ್ಲಿಯೇ ಸಂಸದ ಈಗ ಟ್ವಿಟರ್ ನಲ್ಲಿ ಒಂದು ಮಧುರ ನೆನಪಿನ ಫೋಟೋ ಹಂಚಿಕೊಂಡಿದ್ದಾರೆ.
ಹೌದು. ಸಂಸದ ಸ್ವಿಯಾಟೋಸ್ವಾವ್ ಯುರಾಶ್ ತನ್ನ ಗೆಳತಿ ಮತ್ತು ಪತ್ರಕರ್ತೆ ಅಲೆಕ್ಸಾಂಡ್ರಾ ಕುವ್ಶಿನೋವಾಳ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ತಮ್ಮ ದಶಕದ ಪ್ರೀತಿಯ ಬಗ್ಗೆ ಭಾವುಕರಾಗಿಯೇ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಅವಳಿಲ್ಲದ ಈ ಕ್ಷಣ ಅಸಾಧ್ಯ. ಆದರೂ ನಾನು ಈಗ ಪ್ರೀತಿಯಿಂದ ಹೊರ ಬರಲು ದ್ವೇಷಿಸೋದನ್ನ ಕಲಿತಿರುವೆ ಅಂತಲೇ ಹೇಳಿಕೊಂಡಿದ್ದಾರೆ.
PublicNext
17/03/2022 09:16 pm