ಉಕ್ರೇನ್ ನಲ್ಲಿ 14 ನೇ ದಿನವೂ ಮುಂದುವರೆದ ರಷ್ಯಾ ದಾಳಿ ತಗ್ಗುವಂತೆ ಕಾಣುತ್ತಿಲ್ಲ. ಸದ್ಯ ವೈರಲ್ ಆದ ಸಿಸಿಟಿವಿ ವಿಡಿಯೋವೊಂದು ನಡುಕ ಹುಟ್ಟಿಸುವಂತಿದೆ.
ಉಕ್ರೇನ್ ನ ವಯೋವೃದ್ಧ ದಂಪತಿ ಕಾರಿನ ಮೇಲೆ ರಷ್ಯಾದ ಟ್ಯಾಂಕ್ ಗುಂಡಿನ ದಾಳಿ ನಡೆಸಿದ ಪರಿಣಾಮ ಕಾರಿನಲ್ಲಿದ್ದ ವಯಸ್ಸಾದ ಉಕ್ರೇನಿಯನ್ ದಂಪತಿಗಳು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
ಸದ್ಯ ಈ ವಿಡಿಯೋ ಉಕ್ರೇನ್ ಸಶಸ್ತ್ರ ಪಡೆಗಳ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಎರಡು ಮಿಲಿಯನ್ ವೀಕ್ಷಣೆ ಕಂಡ ವೀಡಿಯೊದಲ್ಲಿ, ರಷ್ಯಾದ ಶಸ್ತ್ರಸಜ್ಜಿತ ವಾಹನವೊಂದು ಕಾರಿನ ಮೇಲೆ ಎರಡು ಸುತ್ತು ಗುಂಡು ಹಾರಿಸಿ ವಾಪಸ್ಸಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಇದು ಫೆ 28 ರಂದು ನಡೆದ ಘಟನೆಯ ದೃಶ್ಯ ಎನ್ನಲಾಗಿದೆ.
PublicNext
09/03/2022 08:51 pm