ಉಕ್ರೇನ್: ರಷ್ಯಾ ದೇಶ ಉಕ್ರೇನ್ ಮೇಲೆ ದಾಳಿ ಮಾಡ್ತಾನೇ ಇದೆ. ಇದೆ ಸಮಯದಲ್ಲಿಯೆ ಉಕ್ರೆನ್ ಅಧ್ಯಕ್ಷ ವೊಲೊದಿಮಿರ ಝಲೆನ್ಸ್ಕಿ ಪತ್ನಿ ಹಾಗೂ ಉಕ್ರೇನ್ ಪ್ರಥಮ ಮಹಿಳೆ ಒಲೆನಾ ಝಲೆನ್ಸ್ಕಿ ಮಾಧ್ಯಮಕ್ಕೆ ಭಾವನಾತ್ಮಕ ಪತ್ರ ಬರೆದು ಉಕ್ರೇನ್ ದೇಶದ ಪರಿಸ್ಥಿತಿ ತಿಳಿಸಿದ್ದಾರೆ.
ಉಕ್ರೇನ್ ದೇಶದ ಮೇಲೆ ಫೆಬ್ರವರಿ-24 ರಂದು ರಷ್ಯಾ ದಾಳಿ ಮಾಡುವುದಾಗಿ ಘೋಷಿಸಿತು. ಅಗ ನಾವು ಎಚ್ಚೆತ್ತುಕೊಂಡು ಯುದ್ಧಕ್ಕೆ ಸನ್ನದ್ಧರಾಗಿದ್ದೇವು. ಈ ಯುದ್ಧದಿಂದ ಅಮಾಯಕರ ಸಾಮೂಹಿಕ ಹತ್ಯೆ ಆಗಿದೆ. ಆದರೆ ರಷ್ಯಾ ಇದನ್ನ 'ವಿಶೇಷ ಕಾರ್ಯಾಚರಣೆ' ಎಂದೇ ಬಣ್ಣಿಸಿದೆ. ನಿಜಕ್ಕೂ ಇದು ವಿಶೇಷ ಕಾರ್ಯಾಚರಣೆ ಅಲ್ಲ.ಉಕ್ರೇನಿಯನ್ ನಾಗರಿಕರ ಸಾಮೂಹಿಕ ಹತ್ಯೆ ಅಂತಲೇ ಪತ್ರದಲ್ಲಿ ಬರೆದುಕೊಂಡಿದ್ದಾರೆ.
"ಮಕ್ಕಳ ಸಾವು ನಿಜಕ್ಕೂ ಭಯಾನಕವಾಗಿದೆ. ಅಷ್ಟೇ ವಿನಾಶಕಾರಿನೂ ಆಗಿದೆ. 8 ವರ್ಷದ ಒಖ್ತಿರ್ಕಾದ ನಿವಾಸಿ ಆಲಿಸ್ ಹೆಸರಿನ ಹೆಣ್ಣು ಮಗು ಯುದ್ಧದಿಂದಲೇ ಬೀದಿಯಲ್ಲಿ ಸತ್ತಳು. ಈಕೆಯನ್ನ ಉಳಿಸಿಕೊಳ್ಳು ಈಕೆಯ ಅಜ್ಜ ಹರಸಾಹಸ ಪಟ್ಟರು. ಆದರೂ ಏನೂ ಪ್ರಯೋಜನ ಆಗಲೇ ಇಲ್ಲ"
ಇದೇ ರೀತಿ ಪುಟಿನ್ ಸೇನೆ ಉಕ್ರೇನ್ ಮೇಲೆ ದಾಳಿ ನಡೆಸುತ್ತಲೇ ಸಾಗಿದರೇ, ಏನಂದ್ರೆ ಏನೂ ಉಳಿಯೋದಿಲ್ಲ ಅಂತಲೇ ಪತ್ರದಲ್ಲಿ ಒಲೆನಾ ಝಲೆನ್ಸ್ಕಿ ಆತಂಕ ವ್ಯಕ್ತಪಡಿಸಿದ್ದಾರೆ.
PublicNext
09/03/2022 01:48 pm