ಉಕ್ರೇನ್: ರಷ್ಯಾ ಮತ್ತು ಉಕ್ರೇನ್ ದೇಶದ ಯುದ್ಧದ ಕರಾಳ ಮುಖಗಳು ಒಂದೊಂದಾಗಿ ಈಗ ಹೊರ ಬೀಳುತ್ತಿವೆ. ಭಾರತ ಮೂಲದ ಗಗನ್ ಹೆಸರಿನ ವ್ಯಕ್ತಿಯನ್ನ ತನ್ನ ಉಕ್ರೇನ್ ದೇಶದ ಪತ್ನಿಯನ್ನ ಬಿಟ್ಟು ಭಾರತಕ್ಕೆ ಬರಲು ನಿರಾಕರಿಸಿದ್ದಾರೆ. ಕಾರಣ, ಏನೂ. ಬನ್ನಿ,ಹೇಳ್ತೀವಿ.
ಕೇಂದ್ರ ಸರ್ಕಾರದ ಗಂಗಾ ಯೋಜನೆಯಡಿ ಉಕ್ರೇನ್‌ಲ್ಲಿರೋ ಭಾರತೀಯರನಷ್ಟೇ ತಾಯ್ನಾಡಿಗೆ ಕರೆತರಲಾಗುತ್ತಿದೆ. ಆದರೆ ಈ ಯೋಜನೆ ಗಗನ್ ಗೆ ನೋವು ತಂದಿದೆ. ತಾನೂ ಭಾರತೀಯ ಸರಿ, ನನ್ನ ಪತ್ನಿ ಉಕ್ರೇನ್ ದೇಶದ ಪ್ರಜೆ. ಈಕೆಯ 8 ತಿಂಗಳ ಗರ್ಭಿಣಿ ಬೇರೆ. ಈಕೆಯನ್ನ ಇಲ್ಲಿಯೇ ಬಿಟ್ಟು ಭಾರತಕ್ಕೆ ಹೇಗೆ ಬರಲಿ ಅಂತಲೇ ಪ್ರಶ್ನೆ ಮಾಡಿದ್ದಾರೆ.
ಸದ್ಯ ಎಲ್ವಿವ್ ನಲ್ಲಿರೋ ಸ್ನೇಹಿತರ ಮನೆಯಲ್ಲಿಯೇ ಗಗನ್ ಮತ್ತು ಆತನ ಪತ್ನಿ ವಾಸವಾಗಿದ್ದಾರೆ. ಪತ್ನಿಯನ್ನ ಬಿಟ್ಟು ನಾನು ಭಾರತಕ್ಕೆ ಬರೋದಿಲ್ಲ ಅಂತಲೇ ಗಗನ್ ಹೇಳಿಕೊಂಡಿದ್ದಾರೆ.
PublicNext
07/03/2022 12:29 pm