ಮಾಸ್ಕೋ: ನಿರೀಕ್ಷೆಯಂತೆ ರಷ್ಯಾ- ಉಕ್ರೇನ್ ಯುದ್ಧ ಅಕ್ಷರಶಃ ಆರಂಭವಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ ಕೆಲವೇ ಸಮಯದಲ್ಲಿ ಉಕ್ರೇನ್‌ನ ಕೈವ್ ಮತ್ತು ಖಾರ್ಕಿವ್‌ನಲ್ಲಿ ಸ್ಫೋಟಗಳು ಕೇಳಿಬಂದಿವೆ.
ಪ್ರತ್ಯೇಕತಾವಾದಿ ಉಗ್ರರ ಹಿಡಿತದಲ್ಲಿರುವ ಡೊನೆಸ್ಕ್ ನಲ್ಲಿ ಕನಿಷ್ಠ ಐದು ಸ್ಫೋಟಗಳ ಸದ್ದು ಕೇಳಿಬಂದಿದೆ. ಇಂದು (ಗುರುವಾರ) ನಸುಕಿನಲ್ಲಿ ಸ್ಫೋಟದ ಸದ್ದು ಕೇಳಿಸಿದ್ದು, ನಾಲ್ಕು ಮಿಲಿಟರಿ ಟ್ರಕ್‌ಗಳು ಸ್ಥಳಕ್ಕೆ ಧಾವಿಸುತ್ತಿರುವ ದೃಶ್ಯ ಕಂಡುಬಂದಿದೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ ದೂರ ದರ್ಶನದಲ್ಲಿ ಮಾತನಾಡಿದ್ದ ಅಧ್ಯಕ್ಷ ಪುಟಿನ್, 'ನಾಗರಿಕರನ್ನ ರಕ್ಷಿಸುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ನಮ್ಮ ಈ ಕ್ರಮವು ಉಕ್ರೇನ್‌ನಿಂದ ಬರುವ ಬೆದರಿಕೆಗಳಿಗೆ ಪ್ರತಿಕ್ರಿಯೆ ಆಗಿರುತ್ತದೆ. ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಗುರಿಯನ್ನು ರಷ್ಯಾ ಹೊಂದಿಲ್ಲ. ರಕ್ತಪಾತದ ಜವಾಬ್ದಾರಿ ಉಕ್ರೇನಿಯನ್ ಸರ್ಕಾರ ಹೊರಲಿದೆ' ಎಂದು ಗುಡುಗಿದ್ದಾರೆ.
PublicNext
24/02/2022 10:14 am