ದುಬೈ: ಅಬುಧಾಬಿ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ. ಈ ವೇಳೆ ಮೂವರು ಸಾವನ್ನಪ್ಪಿದ್ದು ಅದರಲ್ಲಿ ಇಬ್ಬರು ಭಾರತೀಯರಾಗಿದ್ದಾರೆ. ಹೌದು ಅಬುಧಾಬಿ ವಿಮಾನ ನಿಲ್ದಾಣದಲ್ಲಿರುವ ಸೌದಿ ಅರಾಮ್ಕೋ ತೈಲ ಸಂಗ್ರಹಾರದ ಮೇಲೆ ಡ್ರೋನ್ ದಾಳಿ ಮಾಡಲಾಗಿದೆ. ಇಬ್ಬರು ಭಾರತಿಯರು ಹಾಗೂ ಒಬ್ಬ ಪಾಕಿಸ್ತಾನಿ ಪ್ರಜೆ ಸಾವನ್ನಪ್ಪಿದ್ದು, 6 ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಬುಧಾಬಿಯ ರಾಷ್ಟ್ರೀಯ ತೈಲ ಸಂಸ್ಥೆಯ ಶೇಖರಣಾ ಸೌಲಭ್ಯಗಳ ಸಮೀಪವಿರುವ ಕೈಗಾರಿಕಾ ಮುಸಾಫಾ ಪ್ರದೇಶದಲ್ಲಿ ಮೂರು ಇಂಧನ ಟ್ಯಾಂಕರ್ ಟ್ರಕ್ ಗಳು ಸ್ಫೋಟಗೊಂಡಿವೆ ಹಾಗೂ ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ತನಿಖೆಗಳ ಪ್ರಕಾರ ಸ್ಫೋಟ ಹಾಗೂ ಬೆಂಕಿ ಕಾಣಿಸಿಕೊಂಡ ಎರಡೂ ಸ್ಥಳಗಳಲ್ಲಿ ಡ್ರೋನ್ ನ ಭಾಗಗಳು ಕಂಡುಬಂದಿವೆ. ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದರು.
PublicNext
17/01/2022 08:09 pm