2021 ರ ಭುವನ ಸುಂದರಿಯಾಗಿ ಚಂಡೀಗಢ ಮೂಲದ ಹರ್ನಾಜ್ ಕೌರ್ ಸಂಧು ಆಯ್ಕೆಯಾಗಿದ್ದಾರೆ. ಇಸ್ರೇಲ್ ನ ಐಲಾಟ್ ನಲ್ಲಿ ನಡೆದ
70ನೇ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 21 ವರ್ಷದ ಹರ್ನಾಜ್ ಸಂಧು ಭುವನ ಸುಂದರಿಯಾಗಿ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.
ಇಸ್ರೇಲ್ ನ ಐಲಾಟ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಂಡೀಗಢ ಮೂಲದ ಹರ್ನಾಜ್ ಕೌರ್ ಸಂಧು ಆಯ್ಕೆಯಾಗುರವ ಮೂಲಕ 21 ವರ್ಷಗಳ ಬಳಿಕ ಭಾರತಕ್ಕೆ ಮಿಸ್ ಯುನಿವರ್ಸ್ ಪಟ್ಟ ತಂದುಕೊಟ್ಟಿದ್ದಾರೆ. 2000ರಲ್ಲಿ ಲಾರಾದತ್ತ ಭುವನ ಸುಂದರಿಯಾಗಿ ಹೊರಹೊಮ್ಮಿದ್ದರು. ಅವರ ಬಳಿಕ ಈಗ ಹರ್ನಾಜ್ ಸಂಧು 2021ರ ಮಿಸ್ ಯುನಿವರ್ಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಇನ್ನು ಪ್ರಶಸ್ತಿ ಮುಡಿಗೇರಿಸಿಕೊಂಡ ಹರ್ನಾಜ್ ವೇದಿಕೆಯ ಮೇಲೆ ಹೆಜ್ಜೆ ಹಾಕಿ ಚಕ್ ದೇ ಪಟ್ಟೆ ಇಂಡಿಯಾ ಎಂದು ಕೂಗಿದ್ದಾರೆ. ಹಾಗೆಯೇ ವಿನ್ನರ್ ಘೋಷಣೆಗೂ ಮೊದಲು ವೇದಿಕೆಯ ಮೇಲೆ ಹರ್ನಾಜ್ ಬೆಕ್ಕಿನ ಧ್ವನಿಯಲ್ಲಿ ಕೂಗಿದ ವೀಡಿಯೋ ವೈರಲ್ ಆಗಿದೆ. ಇನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಹರ್ನಾಜ್ ಅವರ ಮುಗ್ಧತೆ ನೆಟ್ಟಿಗರ ಮನ ಸೆಳೆದಿದೆ.
PublicNext
13/12/2021 01:28 pm