ನ್ಯೂಯಾರ್ಕ್ : ನಮ್ಮ ದೇಶದಲ್ಲಿ ಜನಿಸಿದ ಅನೇಕರು ವಿದೇಶದಲ್ಲಿ ಸಾಧನೆ ಮಾಡಿದ್ದಾರೆ. ಸದ್ಯ ಅಮೆರಿಕದ ಪ್ರತಿಷ್ಠಿತ ವಿವಿಗೆ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಇತಿಹಾಸ ಸೃಷ್ಟಿಸಿದ ಭಾರತ ನೀಲಿ ಬೆಂಡಪುಡಿ ಅವರು ನಮ್ಮವರು ಎಂಬುವುದೇ ಹೆಮ್ಮೆ. ಭಾರತ ಮೂಲದ ಪ್ರಾಧ್ಯಾಪಕಿ ನೀಲಿ ಬೆಂಡಪುಡಿ ಅವರು ಜಾಗತಿಕ ಶೈಕ್ಷಣಿಕ ವಲಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಅಮೆರಿಕದ ಪ್ರೆಸ್ಟೀಜಿಯಸ್ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ (ಪೆನ್ ಸ್ಟೇಟ್) ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆಯಾಗಿದ್ದಾರೆ.
ವಿಶ್ವವಿದ್ಯಾಲಯದ ಅಧ್ಯಕ್ಷರನ್ನಾಗಿ ನೀಲಿ ಬೆಂಡಪುಡಿ ಅವರನ್ನು ಆಯ್ಕೆ ಮಾಡಿರುವುದಾಗಿ ಶೈಕ್ಷಣಿಕ ಸಂಸ್ಥೆ ಶುಕ್ರವಾರ ಘೋಷಿಸಿದೆ.
ಬೆಂಡಪುಡಿ ಅವರು, ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಜನಿಸಿದರು. 1986 ಉನ್ನತ ಶಿಕ್ಷಣಕ್ಕಾಗಿ ಅಮೆರಿಕಗೆ ತೆರಳಿದರು. ಸದ್ಯ ಅವರು ಲೂಯಿಸ್ ವೆಲ್ಲಿ ವಿಶ್ವವಿದ್ಯಾಲಯದಲ್ಲಿ ಮಾರ್ಕೆಟಿಂಗ್ ವಿಷಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬೆಂಡಪುಡಿ ಅವರನ್ನು ಅಧ್ಯಕ್ಷೆಯಾಗಿ ನೇಮಿಸಿ ವಿಶ್ವವಿದ್ಯಾಲಯದ ಸ್ಟೇಟ್ ಬೋರ್ಡ್ ಟ್ರಸ್ಟೀಸ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಆ ಮೂಲಕ ಬೆಂಡಪುಡಿ ಅವರು ವಿವಿಯ 19 ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೇ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.
PublicNext
10/12/2021 02:58 pm