ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬುದ್ಧಿ ಕಲಿತ ಬ್ರಿಟನ್ : ಲಸಿಕೆ ಪಡೆದ ಭಾರತೀಯರಿಗೆ ನೋ ಕ್ವಾರಂಟೈನ್

ಎರಡು ಲಸಿಕೆ ಪಡೆದ ಭಾರತದ ಪ್ರಯಾಣಿಕರಿಗೆ ಬ್ರಿಟನ್ ಗೆ ಬರಲು ಬ್ರಿಟಿಷ್ ಸರ್ಕಾರ ಸಮ್ಮತಿ ಸೂಚಿಸಿದೆ. ಈ ಹಿಂದೆ ಇಂಗ್ಲೆಂಡ್ ಗೆ ಬರಲು ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದ ಭಾರತದ ಪ್ರಯಾಣಿಕರಿಗೆ ಕಡ್ಡಾಯ ಕ್ವಾರಂಟೈನ್ ವಿಧಿಸಿತ್ತು. ಸದ್ಯ ಈ ನಿರ್ಬಂದದಿಂದ ವಿನಾಯಿತಿ ನೀಡಲು ಮುಂದಾಗಿದೆ.

ಬ್ರಿಟಿಷ್ ಸರ್ಕಾರದ 'ತಾರತಮ್ಯ'ದ ಪ್ರಯಾಣದ ನಿಯಮಗಳಿಗೆ ಪ್ರತಿಕ್ರಿಯೆಯ ಭಾಗವಾಗಿ ಭಾರತವು ಇಂಗ್ಲೆಂಡ್ ನಿಂದ ಆಗಮಿಸುವವರಿಗೆ 10 ದಿನದ ಕ್ವಾರಂಟೈನ್ ಕಡ್ಡಾಯಗೊಳಿಸಿದ ಒಂದು ವಾರದ ನಂತರ, ಲಂಡನ್ ನಲ್ಲಿರುವ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಸರ್ಕಾರವು ಭಾರತದಲ್ಲಿ ಎರಡು ಡೋಸ್ ಲಸಿಕೆ ಪಡೆದ ಕೋವಿಶೀಲ್ಡ್ ಪ್ರಮಾಣಪತ್ರವನ್ನು ಪರಿಗಣಿಸಲು ಒಪ್ಪಿಕೊಂಡಿದೆ.

ಬ್ರಿಟಿಷ್ ಸರ್ಕಾರದ ಪ್ರಯಾಣ ನಿಯಮಗಳಲ್ಲಿನ ಇತ್ತೀಚಿನ ಬದಲಾವಣೆಗಳು ಅ. 11, ಬೆಳಿಗ್ಗೆ 9:30 ರಿಂದ ಜಾರಿಗೆ ಬರಲಿದೆ.

ಕೋವಿಶೀಲ್ಡ್ ಅಥವಾ ಬ್ರಿಟಿಷ್ ಸರ್ಕಾರ ಅನುಮೋದಿಸಿದ ಮತ್ತೊಂದು ಲಸಿಕೆ ಪಡೆದ ಭಾರತೀಯ ಪ್ರಯಾಣಿಕರಿಗೆ ಅಕ್ಟೋಬರ್ 11 ರಿಂದ ಯಾವುದೇ ಕ್ವಾರಂಟೈನ್ ಇಲ್ಲ' ಎಂದು ಬ್ರಿಟಿಷ್ ಸರ್ಕಾರದ ಗ್ರಾಂಟ್ ಶಾಪ್ಸ್ ಕಳೆದ ಸೋಮವಾರ ಜಾರಿಗೆ ಬಂದ ಹೊಸ ಪ್ರಯಾಣ ನಿಯಮಗಳಲ್ಲಿ ಬದಲಾವಣೆಗಳನ್ನು ಘೋಷಿಸಿದ ನಂತರ ಇಂಗ್ಲೆಂಡ್ ನ ಭಾರತದ ರಾಯಭಾರಿ ಅಲೆಕ್ಸ್ ಎಲ್ಲಿಸ್ ಟ್ವೀಟ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

08/10/2021 10:16 am

Cinque Terre

38.45 K

Cinque Terre

4

ಸಂಬಂಧಿತ ಸುದ್ದಿ