ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಿನ್ನೆಸ್ ದಾಖಲೆ ಪುಟ ಸೇರಿದ ಜಪಾನಿನ 107 ವರ್ಷದ ಅವಳಿ ಸಹೋದರಿಯರು

ಟೋಕಿಯೊ: ಜಪಾನಿನ 107 ವರ್ಷ, 330 ದಿನಗಳ ವಯಸ್ಸಿನ ಇಬ್ಬರು ಸಹೋದರಿಯರು ವಿಶ್ವದ ಅತ್ಯಂತ ಹಿರಿಯ ಅವಳಿ ಜೀವಗಳೆಂದು ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ.

ಸಹೋದರಿಯರಾದ ಉಮೆನೊ ಸುಮಿಯಮಾ ಮತ್ತು ಕೌಮೆ ಕೊಡಮಾ ಅವರು 1913ರ ನವೆಂಬರ್ 5ರಂದು ಪಶ್ಚಿಮ ಜಪಾನ್‌ನ ಶೋಡೋಶಿಮಾ ದ್ವೀಪದಲ್ಲಿ ಜನಿಸಿದವರು. 11 ಮಂದಿ ಒಡಹುಟ್ಟಿದವರಲ್ಲಿ ಈ ಅವಳಿಗಳು ಮೂರನೆಯ ಮತ್ತು ನಾಲ್ಕನೆಯವರಾಗಿ ಜನ್ಮತಾಳಿದವರು. ಜಪಾನಿನ ಪ್ರಸಿದ್ಧ ಅವಳಿ ಸಹೋದರಿಯರಾದ ಕಿನ್ ನರಿಟಾ ಮತ್ತು ಜಿನ್ ಕಾನಿ (107 ವರ್ಷಗಳು ಮತ್ತು 175 ದಿನಗಳು) ಅವರ ಹೆಸರಿನಲ್ಲಿ ಇದೇ ಸೆಪ್ಟೆಂಬರ್ 1ರವರೆಗೆ ಇದ್ದ ದಾಖಲೆಯನ್ನು ಉಮೆನೊ ಸುಮಿಯಮಾ ಮತ್ತು ಕೌಮೆ ಕೊಡಮಾ ಅವಳಿ ಸಹೋದರಿಯರು ಮುರಿದಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಲಿಮಿಟೆಡ್ ಹೇಳಿಕೆಯಲ್ಲಿ ತಿಳಿಸಿದೆ.

Edited By : Vijay Kumar
PublicNext

PublicNext

22/09/2021 07:23 am

Cinque Terre

33.03 K

Cinque Terre

1

ಸಂಬಂಧಿತ ಸುದ್ದಿ