ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಬೂಲ್ ನಲ್ಲಿ ಮತ್ತೊಂದು ಸ್ಫೋಟ

ಕಾಬೂಲ್ : ಅಫ್ಘಾನಿಸ್ತಾನದ ಕಾಬೂಲ್ ನಗರದಲ್ಲಿ ಉಗ್ರರು ಆಡಿದ್ದೇ ಆಟವಾಗಿದೆ. ಅಲ್ಲಿನ ಅಫ್ಘನರು ನರಕಯಾತನೆ ತಾಳದೆ ದೇಶ ತೊರೆಯುತ್ತಿದ್ದಾರೆ. ಇದರ ಮದ್ಯ ಇಂದು ಮತ್ತೊಂದು ಸ್ಫೋಟ ಸಂಭವಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಎಚ್ಚರಿಕೆ ಬಳಿಕ ಇಂದು ಮೊದಲ ಸ್ಫೋಟವಾಗಿದೆ. ಸದ್ಯ ಕಾಬೂಲ್ ನ ಗುಲೈ ಏರಿಯಾದಲ್ಲಿ ರಾಕೆಟ್ ದಾಳಿ ಮಾಹಿತಿ ಲಭ್ಯವಾಗಿದೆ.

ಕಾಬೂಲ್ ಏರ್ಪೋರ್ಟ್ ಹೊರಭಾಗದಲ್ಲಿ 3 ಬಾರಿ ಸ್ಫೋಟ ಗಟಿಸಿದೆ. ಕಳೆದ 4 ದಿನದಲ್ಲಿ ಏರ್ಪೋರ್ಟ್ ಹೊರಗೆ 3 ಬಾರಿ ಸ್ಫೋಟ ನಡೆದಿದೆ. ಗುರುವಾರ ನಡೆದ ದಾಳಿಯಲ್ಲಿ 183 ಜನ ಮೃತಪಟ್ಟಿದ್ದರು. ಅಮೆರಿಕದ 13 ಯೋಧರು ಸೇರಿ 183 ಜನ ಮೃತಪಟ್ಟಿದ್ದರು. ಇದೀಗ ಮತ್ತೆ ಸ್ಫೋಟ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

Edited By : Nirmala Aralikatti
PublicNext

PublicNext

29/08/2021 06:49 pm

Cinque Terre

33.4 K

Cinque Terre

2

ಸಂಬಂಧಿತ ಸುದ್ದಿ