ಕಾಬೂಲ್: ತಾಲಿಬಾನ್ ಉಗ್ರರ ವಶವಾದ ಅಫ್ಘಾನಿಸ್ತಾನದ ಕಾಬೂಲ್‌ನಿಂದ ತನ್ನ ದೇಶದ ಪ್ರಜೆಗಳನ್ನು ಸ್ಥಳಾಂತರ ಮಾಡುತ್ತಿದ್ದ ಉಕ್ರೇನ್ ದೇಶದ ವಿಮಾನ ಹೈಜಾಕ್ ಆಗಿದೆ. ಯಾರೋ ಅಪರಿಚಿತರು ಉಕ್ರೇನಿಯನ್ ವಿಮಾನವನ್ನು ಹೈಜಾಕ್ ಮಾಡಿದ್ದಾರೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಯೆವ್ಗೆನಿ ಯೆನ್ ತಡವಾಗಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿರುವ ಯೆವ್ಗೇನಿ ಯೆನಿನ್, "ಕಳೆದ ಭಾನುವಾರ ನಮ್ಮ ವಿಮಾನವನ್ನು ಕೆಲ ಜನರು ಹೈಜಾಕ್ ಮಾಡಿದ್ದಾರೆ. ಉಕ್ರೇನಿಯನ್ನರನ್ನು ಏರ್ ಲಿಫ್ಟ್ ಮಾಡುವ ಬದಲು, ವಿಮಾನದಲ್ಲಿದ್ದ ಕೆಲವರು ಅದನ್ನು ಇರಾನ್‌ಗೆ ತೆಗೆದುಕೊಂಡು ಹೋಗಿದ್ದಾರೆ" ಎಂದು ದೂರಿದ್ದಾರೆ.
ಉಕ್ರೇನ್‌ನ ಸಚಿವರ ಹೇಳಿಕೆ ಬಳಿಕ, ಇರಾನ್‌ನ ಮಂತ್ರಿ ಅಬ್ಬಾಸ್ ಅಸ್ಲಾನಿ ಈ ವಿಮಾನ ಈಶಾನ್ಯ ಇರಾನ್‌ನ ಮಶಾದ್ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದಿದ್ದಾರೆ. ಆದರೆ ಅಲ್ಲಿಂದ ಇಂಧನ ತುಂಬಿಸಿ, ಅವರು ಉಕ್ರೇನ್‌ಗೆ ತೆರಳಿದ್ದಾರೆ. ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿ ಇಳಿಯುವಿಕೆಯ ಮಾಹಿತಿಯೂ ಇದೆ. ಇರಾನ್‌ನ ಈ ಹೇಳಿಕೆಯ ನಂತರ, ವಿಮಾನವನ್ನು ಅಪಹರಿಸಿದ ಘಟನೆ ಭಾರೀ ಅನುಮಾನ ಮೂಡಿಸಿದೆ.
ಭಾನುವಾರ, 31 ಉಕ್ರೇನಿಯನ್ ಪ್ರಜೆಗಳು ಸೇರಿದಂತೆ 83 ಜನರನ್ನು ಹೊತ್ತ ಮಿಲಿಟರಿ ವಿಮಾನ ಅಫ್ಘಾನಿಸ್ತಾನದಿಂದ ಕೀವ್‌ಗೆ ತೆರಳಿತ್ತು. ಉಕ್ರೇನ್‌ನ ಅಧ್ಯಕ್ಷೀಯ ಕಚೇರಿಯ ಪ್ರಕಾರ, ವಿಮಾನದಲ್ಲಿ 12 ಉಕ್ರೇನಿಯನ್ ಸೇನಾ ಸಿಬ್ಬಂದಿ ಕೂಡ ಇದ್ದರು. ಅಫ್ಘಾನಿಸ್ತಾನದಲ್ಲಿ ಇನ್ನೂ 100 ಉಕ್ರೇನಿಯನ್ ನಾಗರಿಕರು ಸಿಲುಕಿದ್ದಾರೆ.
PublicNext
24/08/2021 02:51 pm