ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಯ್ಯೋ.. ತಾಲಿಬಾನ್ ಬರ್ತಿದೆ...ಕಾಪಾಡಿ..ಕಾಪಾಡಿ..: ಕಣ್ಣೀರಿಟ್ಟು ಕೂಗಿದ ಅಫ್ಗನ್ ಮಹಿಳೆ : ವಿಡಿಯೋ ವೈರಲ್

ಕಾಬೂಲ್ : ಅಫ್ಘಾನ್ ನಲ್ಲಿ ತಾಲಿಬಾನ್ ಆಡಳಿತ ಮತ್ತೆ ಅಧಿಕಾರಕ್ಕೆ ಬಂದ ನಂತರ ತಮ್ಮ ದೇಶವನ್ನು ತೊರೆಯಲು ಜನರು ಪರದೇಶಕ್ಕೆ ವಲಸೆ ಹೋಗಲು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾರೆ. 'ತಾಲಿಬಾನ್ ಬರ್ತಿದೆ...' ಎಂದು ಬೇಲಿಯ ಹಿಂದೆ ಮಹಿಳೆಯೊಬ್ಬರು ರೋದಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾಬೂಲ್ ನಲ್ಲಿ ಸೃಷ್ಟಿಯಾಗಿರುವ ಗೊಂದಲಮಯ ಪರಿಸ್ಥಿತಿಯನ್ನು ಈ ವಿಡಿಯೊ ಬಿಂಬಿಸುವಂತಿದೆ. ಅಮೆರಿಕ ಸೇನಾ ಪಡೆಗಳು, ಅಮೆರಿಕನ್ನರು ಹಾಗೂ ಮಿತ್ರ ರಾಷ್ಟ್ರಗಳ ನಾಗರಿಕರನ್ನು ಸುರಕ್ಷಿತವಾಗಿ ಅಫ್ಗನ್ ನಿಂದ ಹೊರ ಹೋಗಲು ಸಹಕಾರ ನೀಡುತ್ತಿವೆ. ಈ ನಡುವೆ ಅಫ್ಗಾನಿಸ್ತಾನದ ಮಹಿಳೆ ತಾಲಿಬಾನಿಗಳಿಂದ ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ.

ಬೇಲಿಯ ತಡೆಯಿಂದ ಮಹಿಳೆ ಕೂಗುತ್ತ ಅಮೆರಿಕ ಪಡೆಗಳ ನೆರವು ಕೋರುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಇದು ಕಾಬೂಲ್ನ ಹಮಿದ್ ಕರ್ಜಾಯಿ ವಿಮಾನ ನಿಲ್ದಾಣದಲ್ಲಿ ಸೆರೆಯಾಗಿರುವ ದೃಶ್ಯಗಳು ಎನ್ನಲಾಗಿದೆ. ಮಂಗಳವಾರ 13 ವಿಮಾನಗಳ ಮೂಲಕ 1,100 ಅಮೆರಿಕದ ನಾಗರಿಕರನ್ನು ಕಾಬೂಲ್ ವಿಮಾನ ನಿಲ್ದಾಣದಿಂದ ಏರ್ಲಿಫ್ಟ್ ಮಾಡಲಿದೆ ಎಂದು ಶ್ವೇತ ಭವನ ತಿಳಿಸಿದೆ.

Edited By : Nirmala Aralikatti
PublicNext

PublicNext

19/08/2021 12:32 pm

Cinque Terre

77.35 K

Cinque Terre

5

ಸಂಬಂಧಿತ ಸುದ್ದಿ