ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಗ್ರರರ ಅಟ್ಟಹಾಸ : ಅಫ್ಘಾನಿಸ್ತಾನದ ಬಾವುಟ ಹಾರಿಸಿದವರ ಮೇಲೆ ಗುಂಡಿನ ದಾಳಿ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ ತಾನು ಆಡಿದ್ದೇ ಆಟವಾಗಿದೆ. ಸದ್ಯ ಅಫ್ಘಾನಿಸ್ತಾನದಲ್ಲಿ ನರಮೇಧ ನಡೆಯುತ್ತಿದೆ. ಉಗ್ರರರ ಕೈಯಿಂದ ಜೀವ ಉಳಿಸಿಕೊಳ್ಳಲು ಜನ ಹರಸಾಹಸಪಡುತ್ತಿದ್ದಾರೆ. ಇದರ ಮಧ್ಯೆ ಶಾಂತಿಮಂತ್ರ ಜಪಿಸಿದ್ದ ತಾಲಿಬಾನ್ ಸದ್ಯ ಅಫ್ಘನ್ ಧ್ವಜ ಹಾರಿಸಿದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಗುಂಡಿನ ದಾಳಿಯಲ್ಲಿ ಮೂವರನ್ನು ಹತ್ಯೆ ಮಾಡಿರುವ ಘಟನೆ ಜಲಾಲಾಬಾದಿನಲ್ಲಿ ನಡೆದಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿರುವುದು ವರದಿಯಾಗುತ್ತಿರುವುದರ ನಡುವೆಯೇ ಈ ದುರ್ಘಟನೆ ಸಂಭವಿಸಿದೆ. ತಾಲಿಬಾನಿಗಳು ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಆಫ್ಘನ್ ರಾಷ್ಟ್ರಧ್ವಜವನ್ನು ಕಿತ್ತು ತಾಲಿಬಾನ್ ಧ್ವಜವನ್ನು ನೆಟ್ಟಿದ್ದರು. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನಾಕಾರರ ಮೇಲೆ ತಾಲಿಬಾನಿಗಳು ಗುಂಡಿನ ದಾಳೆ ನಡೆಸಿದರು ಎಂದು ತಿಳಿದುಬಂದಿದೆ.

Edited By : Nirmala Aralikatti
PublicNext

PublicNext

18/08/2021 08:01 pm

Cinque Terre

116.38 K

Cinque Terre

5

ಸಂಬಂಧಿತ ಸುದ್ದಿ