ಇಸ್ಲಾಮಾಬಾದ್: ಕಂಡಕಂಡವರ ಮೇಲೆ ಅತ್ಯಾಚಾರ, ದೌರ್ಜನ್ಯ ಎಸಗುತ್ತಿರುವ ತಾಲಿಬಾನಿಗಳ ಉಪಟಳಕ್ಕೆ ಅಫ್ಘಾನಿಸ್ತಾನ ರೋಸಿಹೋಗಿದೆ. ಇದಕ್ಕೆಲ್ಲ ಕೊನೆಯೇ ಇಲ್ಲದಾಗಿದೆ. ಆದ್ರೆ ಇಂತಹ ಕ್ರೂರಿಗಳ ಪರ ನಿಂತ ಪಾಕ್ ಪ್ರಧಾನಿ ಇಮ್ರಾನ್ ಖಾನ್, ತಾಲಿಬಾನಿಗಳೂ ಕೂಡ ಸಾಮಾನ್ಯ ನಾಗರೀಕರೇ, ಅವರೇನೂ ಉಗ್ರರಲ್ಲ ಎಂದು ಹೇಳಿಕೆ ನೀಡುವ ಮೂಲಕ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇದು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ನಡೆಸುತ್ತಿರೋ ಹಿಂಸಾಚಾರಕ್ಕೆ ಪಾಕಿಸ್ತಾನ ಪರೋಕ್ಷವಾಗಿ ಬೆಂಬಲಿಸುತ್ತಿದೆ ಎಂಬ ಆರೋಪ ಎಲ್ಲೆಡೆಯಿಂದ ಕೇಳಿಬರುತ್ತಿದೆ. ಪಾಕಿಸ್ತಾನವು ತಾಲಿಬಾನಿಗಳಿಗೆ ರಕ್ಷಣೆ ನೀಡುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, ಪಾಕಿಸ್ತಾನವು 30 ಲಕ್ಷ ಆಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದೆ. ಅದರಲ್ಲಿ ಹೆಚ್ಚಿನವರು ಪಶ್ತೂನ್ ಹಾಗೂ ತಾಲಿಬಾನಿಗಳು. ಅವರೇನೂ ಉಗ್ರರಲ್ಲ, ಹೋರಾಟಗಾರರು. ಅವರಿಗೆ ಪಾಕಿಸ್ತಾನದಲ್ಲಿ 5 ಲಕ್ಷ ಶಿಬಿರಗಳ ವ್ಯವಸ್ಥೆ ಮಾಡಿದ್ದೇವೆ. ಇಂಥ ಹೋರಾಟಗಾರರನ್ನು ನಾವು ಹೇಗೆ ಹತ್ಯೆಗೈಯ್ಯುವುದು ಎಂದು ಪ್ರಶ್ನಿಸಿದ್ದಾರೆ.
ಅಫ್ಘಾನಿಸ್ತಾನ ಸರ್ಕಾರದ ವಿರುದ್ಧದ ಹೋರಾಟದಲ್ಲಿ ತಾಲಿಬಾನ್ ಗಳಿಗೆ ಮಿಲಿಟರಿ, ಆರ್ಥಿಕವಾಗಿ ಮತ್ತು ಗುಪ್ತಚರ ಮಾಹಿತಿಯೊಂದಿಗೆ ಪಾಕಿಸ್ತಾನ ಸಹಾಯ ಮಾಡಿದೆ ಎಂದು ಬಹಳ ಹಿಂದಿನಿಂದಲೂ ಆರೋಪಿಸಲಾಗಿದೆ, ಆದರೆ, ಇಮ್ರಾನ್ ಖಾನ್ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
PublicNext
29/07/2021 02:45 pm