ಪಬ್ಲಿಕ್ ನೆಕ್ಸ್ಟ್ ವಿಶ್ಲೇಷಣೆ : ಕೇಶವ ನಾಡಕರ್ಣಿ
ಕೃಷಿ ಕಾನೂನುಗಳ ವಿರುದ್ದದ ರೈತರ ಹೋರಾಟ ಇಂದು ಅಂತಾರಾಷ್ಟ್ರೀಯ ಸ್ತರದಲ್ಲಿ ಚರ್ಚಾ ವಿಷಯ. ಪರ ವಿರೋಧಗಳ ಸಮರವೆ ಆರಂಭವಾಗಿದೆ, ಕ್ರಿಕೆಟ್ ,ಕನ್ನಡ ಹಿಂದಿ ಚಿತ್ರರಂಗದ ಖ್ಯಾತನಾಮರು ಆಖಾಡಕ್ಕಿಳಿದಿದ್ದಾರೆ.
ಒಂದು ಕಾಲದಲ್ಲಿ ಕ್ರಿಕೆಟ್ ಪ್ರೇಮಿಗಳ ದೇವರಾಗಿ ಮೆರೆದಿದ್ದ ಸಚಿನ್ ತೆಂಡೂಲ್ಕರ್, ಸ್ವರ ಸಾಮ್ರಾಜ್ಞೆ, ಗಾನಕೋಗಿಲೆ ಲತಾಮಂಗೇಶ್ಕರ ತಮ್ಮತಮ್ಮ ಅಭಿಪ್ರಾಯಕ್ಕಾಗಿ ಕೆಲವರಿಂದ ಅವಮಾನ ಎದುರಿಸಬೇಕಾಗಿದೆ. ಅವರಿಗೆ ನೀಡಿದ್ದ ಭಾರತ ರತ್ನ ಪ್ರಶಸ್ತಿ ಪರಾಮರ್ಶಿಸುವ ನಿರ್ಧಾರಗಳೂ ಕೇಳಿಬರತೊಡಗಿವೆ.
ರೈತರ ಹೋರಾಟಕ್ಕೆ ಖದರು ಬಂದಿದ್ದೆ ಅಂತಾರಾಷ್ಟ್ರೀಯ ಖ್ಯಾತಿಯ ಮಾಜಿ ನೀಲಿಚಿತ್ರಗಳ ತಾರೆ ಮಿಯಾ ಖಲೀಫಾ ಹಾಗೂ ಪಾಪ್ ಗಾಯಕಿ ರಿಹಾನಾ ಬೆಂಬಲ ವ್ಯಕ್ತಪಡಿಸಿದ ನಂತರ. ಹಾಗಾದರೆ ಯಾರು ಈ ಮಿಯಾ ಖಲೀಫಾ ಹಾಗೂ ರಿಹಾನಾ, ಇವರ ಕೆಲವು ಟ್ವೀಟ್ ಗಳು ಹೋರಾಟದಲ್ಲಿ ಸಂಚಲನ ಮೂಡಿಸಲು ಕಾರಣಗಳೇನು? ಅವರ ನಿಲುವುಗಳಿಗೆ ಬಾಲಿವುಡ್ ಬೆಂಬಲ ವ್ಯಕ್ತವಾಗಲು ಕಾರಣಗಳೇನು?
ಮಿಯಾ ಖಲೀಫಾ ಲಕ್ಷಾಂತರ ಹಾಗೂ ಪಾಪ್ ಗಾಯಕಿ ರಿಹಾನಾ ಕೋಟ್ಯಂತರ ಫಾಲೋವರ್ಸ್ ಇದ್ದಾರೆ ಎಂಬ ಮಾತ್ರಕ್ಕೆ ಅವರು ವಿಶ್ವದಾದ್ಯಂತ ಜನಪ್ರಿಯರಾಗಿದ್ದಾರೆ ಎಂದಲ್ಲ. ಬದುಕಿನಲ್ಲಿ ನೊಂದವರು, ಸಾಮಾಜಿಕ ಹೋರಾಟ ನಡೆಸಿದವರು. ಶೋಷಣೆಗೊಳಗಾದವರ, ತುಳಿತಕ್ಕೊಳಗಾದವರ ಪರ, ದುರಂತದಲ್ಲಿ ನೊಂದವರಿಗೆ ನೆರವು ನೀಡಿ ಮಾನವೀಯತೆ ಮೆರೆದವರು. ಇದೇ ಅವರನ್ನು ರೈತರ ಬೆಂಬಲಕ್ಕೆ ಎಳೆದು ತಂದಿತು ಎಂದು ವಿಶ್ಲೇಷಿಲಾಗುತ್ತಿದೆ.
ತಪ್ಪೋ ಒಪ್ಪೋ ಭಾರತದಲ್ಲಿ ನಡೆದಿರುವ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಹಾಗೂ ಸರಕಾರದ ನಿಲುವುಗಳನ್ನು ಪ್ರಶ್ನಿಸಿರುವ ಲೆಬೆನಾನ್ ಮೂಲದ ಮಾಜಿ ನೀಲಿತಾರೆ ಮಿಯಾ ಖಲೀಫಾ, ಪತಿಯಿಂದಲೇ ಲೈಂಗಿಕ ಶೋಷಣೆಗೊಳಗಾದವಳು, ಪಾಲಕರ ಪ್ರೀತಿಯಿಂದ ವಂಚಿತಳಾಗಿ ಕುಟುಂಬದಿಂದ ಪರಿತ್ಯಕ್ತಳಾದವಳು.
2020 ರಲ್ಲಿ ಬೈರೂಟ್ ದಲ್ಲಿ ಅಮೋನಿಯಮ್ ನೈಟ್ರೇಟ್ ಉಗ್ರಾಣಗಳು ಸ್ಪೋಟಗೊಂಡು ಸಾವಿರಾರು ಜನ ಮೃತಪಟ್ಟರು. ಹತ್ತು ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾದರು. ಆಗ ಸಂತ್ರಸ್ತರ ನೆರವಿಗೆ ತನ್ನ ಸಮಸ್ತ ಆದಾಯವನ್ನು ದಾನ ಮಾಡಿದ್ದಳು ಮಿಯಾ ಖಲೀಫಾ. ಅಂದು ಅವಳು ಧರಿಸುತ್ತಿದ್ದ ಪ್ರತಿಯೊಂದು ವಸ್ತುವಿಗೂ ಭಾರಿ ಬೇಡಿಕೆ ಇತ್ತು. ಹೀಗಾಗಿ ತಾನು ಧರಿಸುತ್ತಿದ್ದ ಕನ್ನಡಕಗಳ ಹರಾಜಿನಿಂದ ಬಂದ ಹಣವನ್ನು ಪರಿಹಾರಕ್ಕೆ ಕೊಟ್ಟಿದ್ದಳು. ಇದಲ್ಲದೆ ಅನೇಕ ಮಾನವ ಹಕ್ಕುಗಳ ಉಲ್ಲಂಘನೆ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವಳು.
ಅವಳ ಈ ಸಾಮಾಜಿಕ ಕಳಕಳಿಗಳೆ ರೈತರ ಬೆಂಬಲಕ್ಕೆ ಪ್ರೇರಣೆ ನೀಡಿರಿಬಹುದೇನೋ? ರಿಹಾನಾ ಜಗತ್ತಿನ ಪ್ರಖ್ಯಾತ ಪಾಪ್ ಗಾಯಕಿ. ಟ್ವಿಟರ್ ಒಂದರಲ್ಲೇ ಆಕೆಯ ಫಾಲೋವರ್ಸ್ ಹತ್ತು ಕೋಟಿ! ಜಗತ್ತಿನ ಯಾವುದೇ ಮಹಿಳಾ ಪಾಪ್ ಸಿಂಗರ್ಸ್ ಗಿಂತ ಹೆಚ್ಚು ಶ್ರೀಮಂತೆ. ಆಕೆಯ ಆಸ್ತಿಯ ಒಟ್ಟು ಮೌಲ್ಯ ಎಷ್ಟು ಗೊತ್ತೇ? 600 ಮಿಲಿಯನ್ ಡಾಲರ್!
ರಿಹಾನಾ ಕೆರೆಬಿಯನ್ ದ್ವೀಪ ಸಮೂಹದ ಬಾರ್ಬಡೋಸ್ ಎಂಬ ದೇಶದವರು. ಆಕೆಯ ಬಾಲ್ಯವೇ ಆಘಾತಕಾರಿಯಾಗಿತ್ತು. ಕುಡುಕ ಅಪ್ಪನಿಂದ ನಿತ್ಯ ಮನೆ ರಣರಂಗವಾಗುತ್ತಿತ್ತು, ಈಕೆಗೆ ಹದಿನಾಲ್ಕು ವರ್ಷವಾಗಿದ್ದಾಗ ಅಪ್ಪ-ಅಮ್ಮ ಬೇರೆಯಾದರು. ಅಲ್ಲಿಂದಲೇ ಆರಂಭವಾಗಿತ್ತು ಆಕೆಯ ಹೋರಾಟದ ಬದುಕು.
ರಿಹಾನಾ ಜಾಗತಿಕ ವಿದ್ಯಮಾನಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ. ಸೂಡಾನ್, ನೈಜೀರಿಯಾ ಸಾಮಾಜಿಕ ನ್ಯಾಯದ ಹೋರಾಟಗಳನ್ನು ಆಕೆ ಬೆಂಬಲಿಸುತ್ತಲೇ ಬಂದಿದ್ದಾರೆ. ಮ್ಯಾನ್ಮಾರ್ ನ ಬೆಳವಣಿಗೆಗಳ ಕುರಿತೂ ಆಕೆ ಧ್ವನಿ ಎತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ನಡೆದ ಐತಿಹಾಸಿಕ ಮಹಿಳಾ ಪ್ರತಿಭಟನೆಯಲ್ಲಿ ರಿಹಾನಾ ಭಾಗವಹಿಸಿದ್ದರು. ಇದೇ ಕಾರಣಗಳಿಂದ ಹಲವಾರು ದೇಶಗಳ ಜನರಿಗೆ ಟ್ರಂಪ್ ವೀಸಾ ವೀಸಾ ನಿರ್ಬಂದ್ದರು.
ಇದೇ ಖಲೀಫಾ ಹಾಗೂ ರಿಹಾನಾ ಸಾಮಾಜಿಕ ಹೋರಾಟ ಭಾರತದಲ್ಲಿಯ ರೈತರ ಹೋರಾಟಕ್ಕೆ ಪ್ರೇರಣೆಯಾಗಿರಬಹುದು. ಕೃಷಿ ಕಾನೂನಿನ ಸಾಧಕ ಬಾಧಕಗಳ ಬಗ್ಗೆ ಅವರಿಗೆ ಅರಿವಿಲ್ಲದಿರಬಹುದು ಆದರೆ ಲಕ್ಷಾಂತರ ರೈತರು ತಿಂಗಳಿಂದ ಪಟ್ಟು ಹಿಡಿದು ಹೋರಾಡುತ್ತಿರುವುದು ಅವರಿಗೆ ಅವರಿಗೆ ನ್ಯಾಯುತವಾಗಿ ಕಂಡಿರಬಹುದಲ್ಲವೆ?
PublicNext
09/02/2021 11:06 am