ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲಾ..! ಮಸ್ಕ್ ಎಂಬ ಮಸ್ತ್ ಸಾಧಕ

ಇಲಾನ್ ಮಸ್ಕ್ ಮಾಡಿದ ಎಲ್ಲ ಸಾಹಸಗಳೂ ಒಮ್ಮೆಲೆ ಸಾಧನೆ ಆದುವಂಥವಲ್ಲ. ನಂಬಿಕೆ, ಇಚ್ಛಾಶಕ್ತಿ, ಸಾಧಿಸುವ ಹಂಬಲ, ಕಾಯುವ ತಾಳ್ಮೆಯಿದ್ದರೆ ಗೆಲುವು ಅಸಾಧ್ಯವಲ್ಲ ಎಂಬುದನ್ನು ಮಸ್ಕ್ ಸಾಧಿಸಿ ತೋರಿಸಿದ್ದಾರೆ. ಆದ್ದರಿಂದಲೇ, ಅವರಿಂದು ವಿಶ್ವದ ಶ್ರೀಮಂತ ಎಂಬ ಕಿರೀಟ ಧರಿಸಿದ್ದಾರೆ. ಅಂತಹ ಇಲಾನ್ ಮಸ್ಕ್ ಅವರಲ್ಲಿರುವ ಸಾಧಿಸುವ ಛಲ ಎಂದೂ ಮಸುಕಾಗದಿರಲಿ.

ಕೆಲಸ ಮಾಡುವುದೇ ಯಶಸ್ಸಿನ ಗುಟ್ಟು ಎಂಬ ಮಾತೊಂದಿದೆ. ಅದನ್ನು ನಾವೆಲ್ಲರೂ ಕೇಳಿರುತ್ತೇವೆ. ಆದರೆ, ಅದರ ಪಾಲನೆಯೇ ಹಲವರಿಗೆ ಬೇವಿನ ಸೊಪ್ಪು ತಿಂದಂತಾಗುತ್ತದೆ. ಆದರೂ ಕೆಲವರಷ್ಟೇ ಈ ಮಾತನ್ನು ಅತ್ಯಂತ ಆಸ್ಥೆಯಿಂದ, ಶ್ರದ್ಧೆಯಿಂದ ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ಈಗ ಹೇಳ ಹೊರಟಿರುವರ ಕತೆಯೂ ಅಂತಹವರದ್ದೇ. ಈ ನಡುವೆ ಟ್ವಿಟ್ಟರ್‌ನಲ್ಲಿ ನೋಡಿದ ಒಂದು ಟ್ವೀಟ್ ಬಹಳಷ್ಟು ಗಮನ ಸೆಳೆಯಿತು. ಆ ಒಂದು ಸಾಲಿನ ಟ್ವೀಟ್‌ನಲ್ಲಿ ನಮ್ಮ ಜೀವಮಾನಕ್ಕೆ ಸಾಕಾಗುವಷ್ಟು ಬದುಕಿಗೆ ಮಾರ್ಗದರ್ಶನ ಅಡಗಿದೆ ಎನಿಸಿತು. ಅಷ್ಟಕ್ಕೂ, ಆ ಟ್ವೀಟ್‌ನಲ್ಲಿ ಏನಿತ್ತು ಅಂತೀರಾ? Elon Musk is now the richest person in the world at 190 billion ಎಂದು Tesla Owners of Silicon Valley ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಅದಕ್ಕೆ ಇಲಾನ್ ಮಸ್ಕ್ ರಿಪ್ಲೈ ಮಾಡಿದ್ದೇನು ಗೊತ್ತೇ?

How Strange, Well, back to work… ‘ಒಮ್ಮೆ ಉಸಿರುಗಟ್ಟಿ ಓಡಿ, ನಾವು ಗೆದ್ದೆವು ಎಂದು ಸಾರಿ ಬಿಡಬಹುದು. ಆದರೆ, ಆ ಗೆಲುವು Fluke ಅಲ್ಲ ಎಂದು ನಿರೂಪಿಸಲು ಹಿಂದಿಗಿಂತ ಶ್ರಮಪಟ್ಟು ಓಡುತ್ತಲೇ ಇರಬೇಕು. ಒಂದೊಮ್ಮೆ ಗೆಲುವನ್ನು ಸಂಭ್ರಮಿಸುತ್ತ ನಾವು ಮೈ ಮರೆತರೆ ಕುಸಿಯುವುದು ಖಚಿತ. ಗೆದ್ದ ನಂತರವೂ ಕೆಲಸ ಮಾಡುವುದೇ ನಿರಂತರ ಯಶಸ್ಸಿನ ಗುಟ್ಟು’ ಎಂಬುದನ್ನು ಇಲಾನ್ ಮಸ್ಕ್ ತನಗೂ, ತನ್ನ ಕಂಪನಿಗೂ, ವಿಶ್ವಕ್ಕೂ ಒಂದೇ ಸಾಲಿನಲ್ಲಿ ಸಾರಿ ಹೇಳಿದ ಮಾತಿದು.

ತಾನೀಗ ಶ್ರೀಮಂತ, ನಾನು ಇನ್ನಷ್ಟು ಶ್ರೀಮಂತನಾಗಲು ಹೆಚ್ಚು ಶ್ರಮ ಹಾಕೋಣ ಎಂದು ಹೇಳುವ ಮನ ಸ್ಥಿತಿ ಇಲಾನ್‌ಗೆ ಇದ್ದಿದ್ದರೆ, ಈ ಸ್ಥಾನಕ್ಕೆ ಆತ ಹೋಗುತ್ತಿರಲಿಲ್ಲ. ಬದಲಾಗಿ, ‘ಇನ್ನಷ್ಟು ಕೆಲಸ ಮಾಡೋಣ’ ಎಂದು ಇಲಾನ್ ಹೇಳಿದ್ದರಿಂದಲೇ ಆತನನ್ನು ರಿಯಲ್ ಹೀರೋ ಎಂದರೆ ತಪ್ಪಲ್ಲ ಅನಿಸುತ್ತದೆ.

‘ಇಲಾನ್ ರೀವೆ ಮಸ್ಕ್’ ಒಂದೇ ದಿನ ಹೀರೋ ಆದವರಲ್ಲ. ಅವರ ಈ ಸಾಧನೆಯ ಹಿಂದೆ ಸುದೀರ್ಘ ಪಯಣವಿದೆ. 1971ರಲ್ಲಿ ಜನಸಿದ ಮಸ್ಕ್ ಅವರ ತಾಯಿ ಕೆನಡಾ ಮೂಲದವರು, ತಂದೆ ದಕ್ಷಿಣ ಆಫ್ರಿಕಾದವರು. ಹದಿನೇಳನೇ ವಯ ಸ್ಸಿನವರೆಗೂ ದಕ್ಷಿಣ ಆಫ್ರಿಕಾದ ಪ್ರಿಟೋರಾದಲ್ಲೇ ಮಸ್ಕ್ ಓದಿದರು. ನಂತರ ಅವರು ಕೆನಡಾಗೆ ವಲಸೆ ಬಂದರು. ಅಲ್ಲಿ ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರ ದಲ್ಲಿ ಪದವಿ ಪಡೆದರು. ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ವಿಷಯದಲ್ಲಿ ಪಿಎಚ್.ಡಿ ಮಾಡಲು ಮಸ್ಕ್ ಸೇರಿಕೊಂಡರು. ಆದರೆ, ಅವರೊಳಗಿದ್ದ ಉದ್ಯಮಿ ಅವರನ್ನು ತನ್ನತ್ತ ಕೈ ಬೀಸಿ ಕರೆದ ಪರಿಣಾಮ ಪಿಎಚ್.ಡಿ ಬಿಟ್ಟು ಮ್ಯಾನೇಜ್ ‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ನಂತರ 1995ರಲ್ಲಿ ಸ್ಥಾಪಿಸಿದ್ದೇ Zip2 ಎಂಬ ವೆಬ್ ಕಂಪನಿ. ಅದನ್ನು ಕಾಂಪ್ಯಾಕ್ ಕಂಪನಿ 1999ರಲ್ಲಿ ಖರೀದಿಸಿತು. ಆಗ ಶುರುವಾದದ್ದೇ X.com ಎಂಬ ಆನ್‌ಲೈನ್ ಬ್ಯಾಂಕ್. ಒಂದೇ ವರ್ಷದಲ್ಲಿ ಅದು ಕಾನಿನಿಟಿ ಎಂಬ ಕಂಪನಿ ಜತೆ ವಿಲೀನವಯಿತು. ಆನ್‌ಲೈನ್ ಹಣ ವರ್ಗಾವಣೆಯ ಪೇಪಾಲ್ ಆರಂಭಿಸಿದ್ದೇ ಈ ಸಂಸ್ಥೆ. ಒಂದೇ ವರ್ಷದಲ್ಲಿ E-Bay ಕಂಪನಿಯನ್ನು ಮಸ್ಕ್ ಖರೀದಿಸಿದರು.

ನಂತರ ಮಸ್ಕ್ ನೇರವಾಗಿ ಹಾರಿದ್ದು ಅಂತರಿಕ್ಷಕ್ಕೆ. ಅಂದರೆ, ೨೦೦೨ರಲ್ಲಿ SpaceX ಎಂಬ ಗಗನಯಾನ ಸಂಸ್ಥೆ ಪ್ರಾರಂಭಿಸಿದರು. ಅಲ್ಲಿ ಅವರೇ ಸಿಇಒ ಮತ್ತು ಮುಖ್ಯ ಡಿಸೈನರ್. 2004ರಲ್ಲಿ ಪರಿಸರ ಸಂರಕ್ಷಣೆಯ ಕಾಳಜಿಯಿಂದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಾದ ಟೆಸ್ಲಾಗೆ ಸೇರಿದರು. ನಾಲ್ಕೇ ವರ್ಷದಲ್ಲಿ ಟೆಸ್ಲಾದ ಸಿಇಒ ಆದರು. ಅಲ್ಲಿಂದ ಮಸ್ಕ್ ಅವರ ಜರ್ನಿ ವೈವಿಧ್ಯಗಳಿಂದ ಕೂಡಿತು. ಕೃತಿಕ ಬುದ್ಧಿಮತ್ತೆ, ನ್ಯೂರೋ ಟೆಕ್ನಾಲಜಿ, ಮೆದುಳು-ಕಂಪ್ಯೂಟರ್ ನಡುವಿನ ಸಂಹವನ, ವಾಕ್‌ಟ್ರೈನ್(ಅತಿವೇಗದ ರೈಲು) ಆಧಾರಿತ ಹೈಪರ್ ಲೂಪ್‌ನಂತಹ ಸಾಹಸಗಳಿಗೆ ಮಸ್ಕ್ ಕೈಹಾಕಿದ್ದಾರೆ.

ಇಲಾನ್ ಅವರು ಕೈ ಹಾಕಿದ ಕೆಲಸಗಳೆಲ್ಲವೂ ಅವರ ಕೈ ಹಿಡಿದಿವೆ. ಕೆಲವೊಮ್ಮೆ ಕೈಕೊಟ್ಟಿವೆ. ಆದರೆ, ಕೆಲಸದಲ್ಲಿ ತಲ್ಲೀನರಾಗುವ ಗುಣವನ್ನು ಅವರೆಂದೂ ಮರೆತಿಲ್ಲ, ಬಹುಷಃ ಮರೆಯುವುದೂ ಇಲ್ಲ. ಅವರೆಲ್ಲ ಸಾಹಸಗಳಿಗೂ ನಾವೊಮ್ಮೆ ಆಲ್ ದ ಬೆಸ್ಟ್ ಹೇಳೋಣ.

ಕೃಪೆ: ವಿಶ್ವವಾಣಿ

Edited By : Vijay Kumar
PublicNext

PublicNext

10/01/2021 10:36 am

Cinque Terre

25.41 K

Cinque Terre

0

ಸಂಬಂಧಿತ ಸುದ್ದಿ