ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬ್ರಿಟನ್ ಪ್ರಧಾನಿ ಜಾನ್ಸನ್ ಬೋರಿಸ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಕೊರೊನಾ ರೂಪಾಂತರದ ಹಿನ್ನೆಲೆಯಲ್ಲಿ ಜಾನ್ಸನ್ ಬೋರಿಸ್ ಅವರ ಭೇಟಿಯನ್ನು ರದ್ದುಗೊಳಿಸಲಾಗಿದೆ.
ಡೌನಿಂಗ್ ಸ್ಟ್ರೀಟ್ ವಕ್ತಾರರು ನೀಡಿ ಮಾಹಿತಿ ಪ್ರಕಾರ, ಕಳೆದ ತಿಂಗಳು ಭಾರತ ಪ್ರವಾಸ ಮಾಡುವುದಾಗಿ ಖಚಿತ ಪಡಿಸಿದ್ದ ಬೋರಿಸ್ ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಕೊರೋನಾ ವೈರಸ್ ಹಾಗೂ ರೂಪಾಂತರ ವೈರಸ್ ತಳಿ ಕಾರಣ ತಮ್ಮ ಭಾರತ ಪ್ರವಾಸವನ್ನು ಬೊರಿಸ್ ಜಾನ್ಸನ್ ರದ್ದುಗೊಳಿಸಿದ್ದಾರೆ.
ಬೋರಿಸ್ ಜಾನ್ಸರ್ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಕೊರೊನಾ ವೈರಸ್ ಕಾರಣ ಬ್ರಿಟನ್ ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಇಷ್ಟೇ ಅಲ್ಲದೆ ಈಗಾಗಲೇ ಬ್ರಿಟನ್‌ನಿಂದ ವಿಶ್ವಕ್ಕೆ ರೂಪಾಂತರ ಕೊರೊನಾ ವೈರಸ್ ಹರಡುತ್ತಿದೆ. ಈ ಚೈನ್ ತಪ್ಪಿಸಲು ಬ್ರಿಟನ್ ಎಲ್ಲಾ ಪ್ರಯತ್ನ ಕೈಗೊಂಡಿದೆ. ಹೀಗಾಗಿ ಭಾರತ ಪ್ರವಾಸವನ್ನು ರದ್ದು ಮಾಡುತ್ತಿರುವೆ. ಇದಕ್ಕೆ ವಿಷಾಕ ವ್ಯಕ್ತಪಡಿಸುತ್ತೇನೆ ಎಂದು ಪ್ರಧಾನಿ ಮೋದಿ ಬಳಿ ಹೇಳಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್ ವಕ್ತಾರರು ತಿಳಿಸಿದ್ದಾರೆ.
PublicNext
05/01/2021 06:26 pm