ಕ್ರೊಯೇಷಿಯಾ: ಮಹಿಳೆಯೊಬ್ಬರು ತಮ್ಮ ಮುದ್ದು ಶ್ವಾನದ ಜೊತೆಗೆ ವಿವಾಹವಾದ ವಿಚಿತ್ರ ಪ್ರಸಂಗವೊಂದು ಕ್ರೊಯೇಷಿಯಾ ನಡೆದಿದೆ.
ಹೌದು. ಕ್ರೊಯೇಷಿಯಾ ನಿವಾಸಿ ಅಮಂಡಾ ರಾಡ್ಜರ್ಸ್ ಪತಿಯ ವಿಚ್ಛೇದನದಿಂದ ಒಂಟಿತನಕ್ಕೆ ಜಾರಿ, ಮಾನಸಿಕ ಕಿನ್ನತೆಗೆ ಒಳಗಾಗಿದ್ದರು. ಇದರಿಂದಾಗಿ ಅವರು ಸರಿಯಾದ ಜೀವನ ಸಂಗಾತಿಯಾಗಿ ಹುಡುಕಾಟ ನಡೆಸಿದ್ದರು. ಮನುಷ್ಯನನ್ನು ವಿವಾಹವಾಗಲು ಹಿಂಜರಿದ ಅಮಂಡಾ ಹೆಣ್ಣು ನಾಯಿಯೊಂದನ್ನು ಜೀವನ ಸಂಗಾತಿಯನ್ನಾಗಿಸಿಕೊಳ್ಳುತ್ತಾಳೆ. ಅಂದ್ಹಾಗೆ ಈ ಹೆಣ್ಣು ನಾಯಿ ಹೆಸರು “ಶೆಭಾ”. ಇದರ ವಯಸ್ಸು 3 ತಿಂಗಳು.
'ಶೆಭಾ ನನ್ನ ಜೀವನದ ಪ್ರಮುಖದ ಪ್ರಮುಖ ಭಾಗವಾಗಿದೆ. ನಕ್ಕು ಸಂತೋಷಪಡಿಸುವ ಈಕೆ ನಾನು ಅಸಮಾಧಾನಗೊಂಡಾಗ ಬೆಂಬಲ ನೀಡುತ್ತಾಳೆ. ಹೀಗಾಗಿ ಶೆಭಾಳನ್ನು ಗಂಡನಿಗಿಂತ ಹೆಚ್ಚು ಪ್ರೀತಿಸುತ್ತತೇನೆ' ಎಂದು ಅಮಂಡಾ ಹೇಳಿದ್ದಾಳೆ.
ಇನ್ನು ಅಮಂಡಾಗೆ ಬಾಲ್ಯದಿಂದ ವಧುವಿನ ಉಡುಪು ಅಂದ್ರೆ ಬಹಳ ಇಷ್ಟ. ಹೀಗಾಗಿ ಎರಡನೇ ಮದುವೆಗೆ ತಾನೇ ಸ್ವತಃ ವಧುವಿನ ಉಡುಪನ್ನು ವಿನ್ಯಾಸೊಗಳಿಸಿ, ಶೆಭಾಳಗೂ ಉಡುಪನ್ನು ವಿನ್ಯಾಸಗೊಳಿಸಿದ್ಳು. ಅಮಂಡಾಳ ಈ ಅದ್ಧೂರಿ ಮದುವೆಯಲ್ಲಿ ಸುಮಾರು 200 ಮಂದಿ ಪಾಲ್ಗೊಂಡಿದ್ದರು. ಕೊನೆಗೂ ಮನಸು ಇಚ್ಛಿಸಿದ ಶೆಭಾಳನ್ನು 47 ವರ್ಷದ ಅಮಂಡಾ ರಾಡ್ಜರ್ಸ್ ಚುಂಬಿಸುವ ಮೂಲಕ ಸಂಪ್ರದಾಯಾನುಸಾರ ಮದುವೆಯಾದಳು.
PublicNext
23/11/2021 02:40 pm