ಬೀಜಿಂಗ್: ಮೊಟ್ಟಮೊದಲು ಚೀನಾದಲ್ಲೇ ಪತ್ತೆಯಾಗಿದ್ದ ಮಾರಕ ಕೊರೊನಾ ವೈರಸ್ ಈಗ ಮತ್ತೆ ಅಲ್ಲಿನ ಜನರ ಜನ್ಮ ಜಾಲಾಡುತ್ತಿದೆ. ದೇಶದ ಹಲವು ಭಾಗ ಸೇರಿ ಒಟ್ಟು 2 ಸಾವಿರ ಕೊರೊನಾ ಸಕ್ರಿಯ ಪ್ರಕರಣಗಳು ವರದಿಯಾಗಿವೆ ಎಂದು ಚೀನಾ ಆರೋಗ್ಯಾಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.
ಕೊರೊನಾ ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಚೀನಾ ಸರ್ಕಾರ ದೇಶದ ಹಲವೆಡೆ ಈಗಾಗಲೇ ಲಾಕ್ ಡೌನ್ ಜಾರಿ ಮಾಡಿದೆ. ಜಿಲಿನ್ ಪ್ರಾಂತ್ಯದ ರಾಜಧಾನಿ ಚಾಂಗ್‌ಚುನ್‌ನಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕು ಕಂಡು ಬಂದ ಹಿನ್ನೆಲೆ ಶುಕ್ರವಾರದಿಂದ ಲಾಕ್ ಡೌನ್ ವಿಧಿಸಲಾಗಿದೆ.
PublicNext
13/03/2022 07:19 pm