ವಾಷಿಂಗ್ಟನ್ : ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಪುರುಷ ಪ್ರಧಾನವಾದ ಅಮೆರಿಕದ ರಾಜಕೀಯ ವ್ಯವಸ್ಥೆಯಲ್ಲಿ20 ವರ್ಷ ಹಿಂದೆಯೇ ಕಮಲಾ ಹ್ಯಾರಿಸ್ (56) ಅವರು ತಮ್ಮ ಛಾಪು ಮೂಡಿಸಿದ್ದಾರೆ.
ತಂದೆ ಡೊನಾಲ್ಡ್ ಹ್ಯಾರಿಸ್ ಮತ್ತು ತಾಯಿ ಶ್ಯಾಮಲಾ ಗೋಪಾಲನ್ ಅವರ ನಾಗರಿಕ ಹಕ್ಕುಗಳ ರಕ್ಷಣೆ ಚಳವಳಿ ಮತ್ತು ಹೋರಾಟವನ್ನು ಕಮಲಾ ಮುಂದುವರಿಸಿಕೊಂಡು ಬಂದರು.
ಕಪ್ಪುವರ್ಣೀಯರ ಹಕ್ಕುಗಳಿಗೆ ಧ್ವನಿ ಎತ್ತಿದ ಕಮಲಾ , 2017ರಲ್ಲಿ ಅಟಾರ್ನಿ ಜನರಲ್ ಆಗಿ ಗಮನ ಸೆಳೆದರು.
ತಮ್ಮ ರಾಜಕೀಯ, ಕಾನೂನು, ಅರ್ಥಶಾಸ್ತ್ರದ ಜ್ಞಾನದಿಂದ ಅಮೆರಿಕದಲ್ಲಿ ಹಲವಾರು ಜನಾಂದೋಲನಗಳಲ್ಲಿ ಭಾಗವಹಿಸಿ ಕಮಲಾ ಅವರು ಸ್ಥಳೀಯರ ಮಹಿಳೆಯರ ಅಚ್ಚುಮೆಚ್ಚಿನ ನಾಯಕಿಯಾಗಿ ಹೊರಹೊಮ್ಮಿದ್ದಾರೆ.
ಟ್ರಂಪ್ ಎದುರು ಕಳೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಮಹಿಳಾ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸೋಲುಂಡಿದ್ದರು.
ಆ ಹತಾಶೆಯನ್ನು ತಮ್ಮ ಜಯದ ಮೂಲಕ ಕಮಲಾ ನಿವಾರಿಸಿದ್ದಾರೆ ಎನ್ನುವುದು ಕ್ಯಾಲಿಫೋರ್ನಿಯಾ ಮಹಿಳೆಯರ ಅಭಿಪ್ರಾಯ.
ಕಮಲಾ ಹ್ಯಾರಿಸ್ ಅವರ ಪರಿಚಯ
ಜನನ: 1964 ಅ.20 ಓಕ್ಲಾಂಡ್, ಕ್ಯಾಲಿಫೋರ್ನಿಯಾ
ಶಿಕ್ಷಣ: ಯುಸಿ ಹ್ಯಾಸ್ಟಿಂಗ್ ಕಾನೂನು ಕಾಲೇಜಿನಲ್ಲಿಪದವಿ, ಹೊವರ್ಡ್ ವಿವಿಯಿಂದ ರಾಜಕೀಯಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿಪದವಿ
ಪತಿ: ಡೌಗ್ಲಾಸ್ ಎಮ್ ಹಾಫ್ (2014ರಲ್ಲಿ ವಿವಾಹ)
* 2008-2011: ಸ್ಯಾನ್ ಫ್ರಾನ್ಸಿಸ್ಕೊದ 27ನೇ ಜಿಲ್ಲಾ ಅಟಾರ್ನಿ
* 2011-2017: ಕ್ಯಾಲಿಫೊರ್ನಿಯಾದ 32ನೇ ಅಟಾರ್ನಿ ಜನರಲ್
* 2017 ಜ.3 - ಕ್ಯಾಲಿಫೊರ್ನಿಯಾ ಸಂಸದೆಯಾಗಿ ಆಯ್ಕೆ
PublicNext
08/11/2020 08:01 am