ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್‌ ರಸ್ತೆಯಲ್ಲಿ ಹೊತ್ತಿ ಉರಿಯುತ್ತಿವೆ ಸೈನಿಕರ ದೇಹಗಳು

ನವದೆಹಲಿ: ರಷ್ಯಾ ಹಾಗೂ ಉಕ್ರೇನ್ ದೇಶದ ಮಧ್ಯೆ ಏರ್ಪಟ್ಟಿರುವ ಸಮರ ಇದೀಗ ವಿಶ್ವದ ಗಮನಸೆಳೆದಿದೆ. ರಷ್ಯಾ ಶಸ್ತ್ರಾಸ್ತ್ರಗಳ ಮುಂದೆ ಉಕ್ರೇನ್ ಹೊಂದಿರುವ ಸೈನ್ಯ ಬಲ ಶಸ್ತ್ರಾಸ್ತ್ರ ಬಲ ಕಡಿಮೆ ಇದ್ದರೂ ಉಕ್ರೇನ್ ದೇಶ ಮಾತ್ರ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುತ್ತಿಲ್ಲ. ಉಕ್ರೇನ್‌ನ ಹಲವು ನಗರಗಳು ಈಗಾಗಲೇ ರಷ್ಯಾ ಕೈವಶವಾಗಿವೆ. ಯುದ್ಧದಲ್ಲಿ ಪಾಲ್ಗೊಂಡಿರುವ ಸೈನಿಕರ ಮೃತ ದೇಹಗಳು ರಸ್ತೆ ಮಧ್ಯೆಯೇ ಹೊತ್ತಿ ಉರಿಯುತ್ತಿವೆ.

ಹೌದು! ಉಕ್ರೇನ್‌ನ ರಸ್ತೆಯೊಂದರಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಉಕ್ರೇನ್ ದೇಶದ ಹಲವು ಸೈನಿಕರು ಅಸುನೀಗಿದ್ದಾರೆ. ಅವರ ಮೃತ ದೇಹಗಳು ರಸ್ತೆಯ ಅಕ್ಕಪಕ್ಕ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಹೊತ್ತಿ ಉರಿಯುತ್ತಿವೆ.

ಈ ರೀತಿಯ ಹಿಂಸಾತ್ಮಕ ದಾಳಿ ಕೈಬಿಟ್ಟು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹಲವು ದೇಶಗಳು ಒತ್ತಾಯಿಸುತ್ತಿದ್ದರೂ ರಷ್ಯಾ ಮಾತ್ರ ತನ್ನ ನಿರಂತರ ದಾಳಿಯನ್ನು ಮುಂದುವರೆಸಿದೆ. ಉಕ್ರೇನ್ ದೇಶದ ಸೈನಿಕರು ಸೇರಿದಂತೆ ಅಲ್ಲಿನ ಸಾಕಷ್ಟು ಪ್ರಜೆಗಳು ಕೂಡ ಈಗಾಗಲೇ ಪ್ರಾಣ ತೆತ್ತಿದ್ದಾರೆ.

Edited By : Nagesh Gaonkar
PublicNext

PublicNext

26/02/2022 10:07 pm

Cinque Terre

221.61 K

Cinque Terre

2

ಸಂಬಂಧಿತ ಸುದ್ದಿ