ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಜರಾತ್,ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ : ಗುಜರಾತ್‌ನಲ್ಲಿ ಲಾರಿ ಹರಿದು ಕೆಆರ್‌ಎಸ್‌ ಪಕ್ಷದ ಇಬ್ಬರ ಸಾವು

ಬೆಂಗಳೂರು: ಅತ್ಯಾಚಾರಿಗಳಿಗೆ ತಕ್ಷಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದಿಲ್ಲಿಗೆ ಕಾಲ್ನಡಿಗೆ ಜಾಥಾ ಮಾಡುತ್ತಿದ್ದ ವೇಳೆ ವಿಶ್ರಾಂತಿ ಪಡೆಯುತ್ತಿದ್ದ ಓಮ್ನಿ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು, ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.

ಹೌದು ಗುಜರಾತ್‌ನ ಭರೂಚ್‌ನಲ್ಲಿ ಪಾದಯಾತ್ರಿಗಳ ಮೇಲೆ ಲಾರಿ ಹರಿದು ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್‌) ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಚ್.ಎಚ್‌.ಲಿಂಗೇಗೌಡ (49) ಹಾಗೂ ಪಕ್ಷದ ಸದಸ್ಯ ಕುಂಞಿ ಮೂಸಾ (38) ಮೃತಪಟ್ಟಿದ್ದಾರೆ.

ಲಿಂಗೇಗೌಡ ಅವರು ಮಂಡ್ಯ ಜಿಲ್ಲೆಯ ಮದ್ದೂರಿನ ಸೋಂಪುರ ಗ್ರಾಮದವರು. ಮೂಸಾ ಮಂಗಳೂರಿನವರು. ಲಿಂಗೇಗೌಡ ಅವರು ಅಬಕಾರಿ ಇನ್‌ಸ್ಪೆಕ್ಟರ್‌ ಹುದ್ದೆಯಲ್ಲಿಗೆ ರಾಜೀನಾಮೆ ಸಲ್ಲಿಸಿ, ಚಳವಳಿ, ರಾಜಕಾರಣ ಪ್ರವೇಶಿಸಿದ್ದರು.

ಅತ್ಯಾಚಾರ ಆರೋಪದ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ಮಾಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ರಾಷ್ಟ್ರಪತಿ ಮತ್ತು ಪ್ರಧಾನಿಯವರನ್ನು ಭೇಟಿಯಾಗಿ ಮನವಿ ನೀಡಲು ಮಂಗಳೂರಿನಿಂದ ದೆಹಲಿಗೆ ಐವರ ತಂಡ ಪಾದಯಾತ್ರೆಯ ಮೂಲಕ ಹೊರಟಿತ್ತು. 55ನೇ ದಿನದ ಪಾದಯಾತ್ರೆಯು ಗುಜರಾತಿನ ಭರೂಚ್ ನಗರವನ್ನು ಬುಧವಾರ ತಲುಪಿತ್ತು.

ಕಾನೂನು ಪ್ರಕ್ರಿಯೆ ಮುಗಿಸಿ ಮೃತದೇಹಗಳನ್ನು ರಾಜ್ಯಕ್ಕೆ ವಾಪಸ್‌ ತರಲು ಪ್ರಯತ್ನಿಸಲಾಗುತ್ತಿದೆ. ಗುರುವಾರ ಸಂಜೆ ವೇಳೆಗೆ ಮೃತದೇಹಗಳನ್ನು ರಾಜ್ಯಕ್ಕೆ ತರಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆರು ವರ್ಷಗಳಿಂದ ಪಕ್ಷದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದ ಲಿಂಗೇಗೌಡ ಅವರು ಇತ್ತೀಚೆಗೆ ಕಾರ್ಯಾಧ್ಯಕ್ಷರಾಗಿ ನೇಮಕ ಆಗಿದ್ದರು ಎಂದು ಕೆಆರ್‌ಎಸ್‌ ಪಕ್ಷದ ಸಂಘಟನಾ ಕಾರ್ಯದರ್ಶಿ ಎಲ್‌.ಜೀವನ್‌ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

12/12/2024 07:37 am

Cinque Terre

21.22 K

Cinque Terre

3

ಸಂಬಂಧಿತ ಸುದ್ದಿ