ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 21 ವರ್ಷದ ಇಬ್ಬರು ಟ್ರೈನಿ ಪೈಲಟ್‌ಗಳು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ಭಾನುವಾರ ರಾತ್ರಿ ಕಾರು ಚಲಾಯಿಸುವ ಮುನ್ನ ಪೈಲಟ್‌ಗಳ ಗುಂಪು ಮದ್ಯ ಸೇವಿಸಿದ್ದು, ಈ ವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರು ಕೂಡ ಬಾರಾಮತಿಯಲ್ಲಿರುವ ರೆಡ್‌ಬರ್ಡ್ ಏವಿಯೇಷನ್ ಅಕಾಡೆಮಿಯಿಂದ ಬಂದವರಾಗಿದ್ದಾರೆ.
PublicNext
09/12/2024 03:11 pm