ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲಿನ ಇಂಜಿನ್ ಮೇಲೆ ಹತ್ತಿದ ವ್ಯಕ್ತಿ ವಿದ್ಯುದಾಘಾತ - ಸುಟ್ಟು ಕರಕಲಾದ ದೇಹ

ಲಕ್ನೋ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಶುಕ್ರವಾರ ಗೋವಾಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್‌ಗೆ ಹಾರಿ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ.

ಇಂಜಿನ್‌ನ ಓವರ್‌ಹೆಡ್ ಲೈವ್ ಕೇಬಲ್ ಸಂಪರ್ಕಕ್ಕೆ ಬಂದ ನಂತರ ವ್ಯಕ್ತಿಯ ದೇಹವು ಸುಟ್ಟು ಕರಕಲಾಗಿದೆ. ಘಟನೆಯಿಂದಾಗಿ ರೈಲು ನಿಲ್ದಾಣದಲ್ಲಿ ಸುಮಾರು 45 ನಿಮಿಷಗಳ ಕಾಲ ಸ್ಥಗಿತಗೊಂಡಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

07/12/2024 10:27 pm

Cinque Terre

79.31 K

Cinque Terre

0