ಕಾಂಗೋ : ಕೆಲವು ಸಂದರ್ಭಗಳಲ್ಲಿ ಸಾವು ಹೇಗೆ ಬರತ್ತೊ ತಿಳಿಯುವುದಿಲ್ಲ. ಹೋಗು ಹೋಗುತ್ತಲೇ ಸಾವು ಸಮೀಪಿಸಿ ಬಿಡುತ್ತದೆ. ಸದ್ಯ ಮಾರುಕಟ್ಟೆಗೆ ತರಕಾರಿ ತರಲೆಂದು ಬಂದ 30 ಮಂದಿ ಸಾವನ್ನಪ್ಪಿದ ಘಟನೆ ಘಟನೆ ಕಾಂಗೋ ಗಣರಾಜ್ಯದಲ್ಲಿ ನಡೆದಿದೆ.
ಹೌದು ಹೈವೋಲ್ಟೇಜ್ ವಿದ್ಯುತ್ ತಂತಿಯೊಂದು ಮಾರುಕಟ್ಟೆಯ ಮಧ್ಯೆ ತುಂಡಾಗಿ ಬಿದ್ದಿರುವುದನ್ನು ಗಮನಿಸದ ಜನ ಎಂದಿನಂತೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟು ದಾರುಣ ಅಂತ್ಯ ಕಂಡಿದ್ದಾರೆ.
ಇಲ್ಲಿಯ ಕಿಬ್ಲಾ ಪ್ರದೇಶದ ಮಾರುಕಟ್ಟೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಮಾರುಕಟ್ಟೆ ರಸ್ತೆ ತುಂಬೆಲ್ಲಾ ಕೆಸರು ಇದರಿಂದ ಅಲ್ಲಿನ ವಿದ್ಯುತ್ ಕಂಬಗಳು ಕೂಡ ಸಡಿಲಗೊಂಡಿದ್ದವು.
ಇಷ್ಟಾದರೂ ಅದನ್ನು ಯಾರೂ ಗಮನಿಸಿರಲಿಲ್ಲ. ಎಂದಿನಂತೆ ತರಕಾರಿ ಖರೀದಿಸಲು ಜನ ಬಂದಾಗ ಅವರ ಮೇಲೆ ಹೈವೋಲ್ಟೇಜ್ ತಂತಿ ಬಿದ್ದಿದೆ. ಮಾರುಕಟ್ಟೆ ಪೂರ್ತಿ ಕೆಸರುಮಯವಾಗಿದ್ದರಿಂದ ಕರೆಂಟ್ ಇಡೀ ಪ್ರದೇಶಕ್ಕೆ ಪಸರಿಸಿದೆ.
ನೀರಿನ ಸಂಪರ್ಕಕ್ಕೆ ಬಂದವರಿಗೆ ಶಾಕ್ ತಗುಲಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೃತದೇಹಗಳು ಒಂದಕ್ಕೊಂದು ಅಂಟಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
PublicNext
04/02/2022 09:54 pm