ಕಾಬೂಲ್: ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ನ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿದ್ದ ಅಲ್-ಖೈದಾ ಹಿರಿಯ ನಾಯಕ ಅಬು ಮುಹ್ಸಿನ್ ಅಲ್ ಮಸ್ರಿಯನ್ನು ಭದ್ರತಾ ಪಡೆಗಳು ಹತ್ಯೆಗೈದಿದೆ ಎಂದು ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ ಹೇಳಿದೆ.
"ಅಬು ಮುಹ್ಸಿನ್ ಅಲ್ ಮಸ್ರಿ ಹತ್ಯೆಯು ಭಯೋತ್ಪಾದಕ ಸಂಘಟನೆಗೆ ದೊಡ್ಡ ಹಿನ್ನಡೆಯಾಗಿದೆ. ಅಮೆರಿಕ ಮತ್ತು ಅದರ ಪಾಲುದಾರರು ಸಹಾಯದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ'' ಎಂದು ಯುಎಸ್ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ತಿಳಿಸಿದೆ.
PublicNext
25/10/2020 04:09 pm