ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಸಪ್ತಪದಿ’ ಯೋಜನೆಯಡಿ ಅರ್ಜಿ ಅಹ್ವಾನ : ವರನಿಗೆ 5 ಸಾವಿರ, ವಧುವಿಗೆ 10 ಸಾವಿರ ರೂ.

ಬಳ್ಳಾರಿ: ಸರಳ ಸಾಮೂಹಿಕ ವಿವಾಹಗಳನ್ನು ನಡೆಸಲು ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರಮುಖ ದೇವಾಲಯಗಳು ಉದ್ದೇಶಿಸಲಾಗಿದ್ದು, ಆಸಕ್ತ ವಧು-ವರರು ಸಾಮೂಹಿಕ ವಿವಾಹ ನಡೆಯುವ ಆಯಾ ದೇವಸ್ಥಾನದ ಕಾರ್ಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಪ್ತಪದಿ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ವರನಿಗೆ ಪ್ರೋತ್ಸಾಹಧನ(ಹೂವಿನ ಹಾರ,ಪಂಚೆ,ಶರ್ಟ್ ಮತ್ತು ಶಲ್ಯಗೆ)ವರನ ಉಳಿತಾಯ ಖಾತೆಗೆ 5 ಸಾವಿರ ರೂ. ಜಮಾ ಮಾಡಿಸಲಾಗುವುದು, ವಧುವಿಗೆ ಪ್ರೋತ್ಸಾಹಧನ (ಹೂವಿನ ಹಾರ,ಧಾರೆ ಸೀರೆ ಮತ್ತು ರವಿಕೆ ಕಣಕ್ಕಾಗಿ)ವಧುವಿನ ಬ್ಯಾಂಕ್ ಉಳಿತಾಯ ಖಾತೆಗೆ 10 ಸಾವಿರ ರೂ. ಜಮಾ ಮಾಡಿಸಲಾಗುವುದು, ವಧುವಿಗೆ ಚಿನ್ನದ ತಾಳಿ, ಎರಡು ಗುಂಡು(ಅಂದಾಜು 8 ಗ್ರಾಂ ತೂಕ) ದೇವಸ್ಥಾನದ ವತಿಯಿಂದ (40 ಸಾವಿರ ರೂ.ಮೌಲ್ಯ) ಖರೀದಿಸಿ ನೀಡಲಾಗುವುದು.

ವಿವಾಹವಾದ ಜೋಡಿಗಳಿಗೆ ದೇವಸ್ಥಾನದ ವತಿಯಿಂದ ವಧು-ವರರಿಗೆ 55 ಸಾವಿರದವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಆಸಕ್ತರು ಆಯಾ ದೇವಸ್ಥಾನದಲ್ಲಿ ವಿವಾಹ ನಡೆಯುವ 30 ದಿನಗಳ ಮುಂಚಿತವಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

01/03/2021 01:54 pm

Cinque Terre

54.92 K

Cinque Terre

0

ಸಂಬಂಧಿತ ಸುದ್ದಿ