ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐದು ತಿಂಗಳಿನಿಂದ ಸ್ಥಗಿತವಾಗಿದ್ದ ಭಾರತ-ಕೆನಡಾ ವಿಮಾನಯಾನ ಇಂದಿನಿಂದ ಆರಂಭ

ಕೆನಡಾ: ಐದು ತಿಂಗಳ ಬಳಿಕ ಭಾರತದ ಪ್ರಯಾಣಿಕರ ಮೇಲಿನ ನಿರ್ಬಂಧವನ್ನು ತೆಗೆದುಹಾಕಿರುವ ಜಸ್ಟಿನ್ ಟ್ರೂಡೊ ನೇತೃತ್ವದ ಕೆನಡಾ ಸರ್ಕಾರ ಇಂದಿನಿಂದ ಭಾರತದ ವಿಮಾನಗಳು ಕೆನಡಾಗೆ ಹಾರಾಟ ನಡೆಸಬಹುದು ಎಂದು ತಿಳಿಸಿದೆ. “ಸೆಪ್ಟೆಂಬರ್ 27, 2021 ರಿಂದ, ಭಾರತದಿಂದ ಕೆನಡಾಕ್ಕೆ ವಿಮಾನ ಸೇವೆ ಪುನಾರಂಭಗೊಳ್ಳಲಿದ್ದು, ಕೆಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೆನಡಾಕ್ಕೆ ಪ್ರಯಾಣಿಸಬಹುದು.

ಭಾರತದಿಂದ ಬರುವ ಪ್ರಯಾಣಿಕರು ದೆಹಲಿ ವಿಮಾನ ನಿಲ್ದಾಣದಲ್ಲಿ ಅನುಮೋದಿತ ಪ್ರಯೋಗಾಲಯದಿಂದ ಕೋವಿಡ್​ ನೆಗೆಟಿವ್​ ರಿಪೋರ್ಟ್​ ತೆಗೆದುಕೊಂಡು ಬರಬೇಕು. ಈ ವರದಿಯು ನಿರ್ಗಮನಕ್ಕೆ 18 ಗಂಟೆಗಳಿಗಿಂತ ಮುಂಚಿತವಾಗಿ ಪಡೆದಿರಬೇಕು” ಎಂದು ಕೆನಡಾ ಸರ್ಕಾರ ತಿಳಿಸಿದೆ.

Edited By : Nagaraj Tulugeri
PublicNext

PublicNext

27/09/2021 07:43 am

Cinque Terre

33.32 K

Cinque Terre

0

ಸಂಬಂಧಿತ ಸುದ್ದಿ