ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಲ್‌ಪಿಜಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ: ಪ್ರತಿ ಸಿಲಿಂಡರ್‌ಗೆ 50 ರೂ. ಏರಿಕೆ!

ನವದೆಹಲಿ: ಡಿಸೆಂಬರ್‌ ತಿಂಗಳಲ್ಲಿನಲ್ಲೇ ಎರಡನೇ ಬಾರಿ ಅಡುಗೆ ಅನಿಲ (ಎಲ್‌ಪಿಜಿ) ದರವನ್ನು ಏರಿಕೆ ಮಾಡಲಾಗಿದೆ. ಇಂದು ಪ್ರತಿ ಸಿಲಿಂಡರ್‌ಗೆ 50 ರೂ.ರಷ್ಟು ಹೆಚ್ಚಿಸಲಾಗಿದೆ.

ಪರಿಣಾಮ 14.2ಕೆ.ಜಿ ಸಿಲಿಂಡರ್‌ನ ದರ 644 ರೂ. ಇದ್ದ ಬೆಲೆ 694ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಮಾರಾಟ ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ. ಡಿಸೆಂಬರ್‌ 1ರಂದು ಪ್ರತಿ ಸಿಲಿಂಡರ್ ದರ 50 ರೂ.ರಷ್ಟು ಹೆಚ್ಚಿಳ ಆಗಿತ್ತು. 5 ಕೆ.ಜಿ.ಯ ಪ್ರತಿ ಸಿಲಿಂಡರ್‌ ದರ 18 ರೂ. ಹಾಗೂ 19 ಕೆ.ಜಿ ಸಿಲಿಂಡರ್‌ ದರ 36.50 ರೂ.ನಷ್ಟು ಹೆಚ್ಚಾಗಿದೆ.

Edited By : Vijay Kumar
PublicNext

PublicNext

16/12/2020 07:17 pm

Cinque Terre

39.03 K

Cinque Terre

0

ಸಂಬಂಧಿತ ಸುದ್ದಿ