ಹಂಪಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಅಧಿಕೃತ ಚಾಲನೆ ದೊರೆತಿದೆ. ಈ ಮೂಲಕ ಸಮಸ್ತ ಭಾರತೀಯರ ಬಹುವರ್ಷಗಳ ಬೇಡಿಕೆ ಈಡೇರಿದೆ. ಈ ಮಧ್ಯೆ ಕರ್ನಾಟಕದ ಹಂಪಿಯಲ್ಲಿ ವಿಶ್ವದ ಅತಿ ಎತ್ತರದ ಹನುಮ ಪ್ರತಿಮೆ ಪ್ರತಿಷ್ಠಾಪಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಶ್ರೀರಾಮಭಕ್ತ ಹನುಮಂತನ ಬೃಹತ್ ಪ್ರತಿಮೆ ಹಂಪಿಯಲ್ಲಿ ತಲೆ ಎತ್ತಲಿದೆ.
ಹಂಪಿ ಮೂಲದ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ 215 ಮೀಟರ್ ಎತ್ತರದ ಹನುಮಂತನ ಮೂರ್ತಿಯನ್ನು ನಿರ್ಮಿಸಲು ಮುಂದಾಗಿದೆ. ಹನುಮಂತನ ಜನ್ಮಸ್ಥಳವಾದ ಕಿಷ್ಕಿಂಧಾದಲ್ಲಿ ಒಟ್ಟು 1,200 ಕೋಟಿ ರೂ. ವೆಚ್ಚದಲ್ಲಿ ರಾಮಭಕ್ತ ಹನುಮಂತನ ವಿಗ್ರಹ ನಿರ್ಮಿಸಲು ಯೋಜನೆ ಈಗಾಗಲೇ ಸಿದ್ಧವಾಗಿದೆ. ಮುಂದಿನ ಆರು ವರ್ಷಗಳಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಈ ಕುರಿತು ಮಾತನಾಡಿರುವ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಗೋವಿಂದನಂದ ಸರಸ್ವತಿ ಸ್ವಾಮಿ, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಪ್ರಭು ಶ್ರೀರಾಮನ ಮೂರ್ತಿ 221 ಮೀಟರ್ ಎತ್ತರವಿರಲಿದೆ. ಹಂಪಿಯಲ್ಲಿ ನಿರ್ಮಾಣವಾಗಲಿರುವ ಹನುಮಂತನ ಮೂರ್ತಿ 215 ಮೀಟರ್ ಎತ್ತರವಿರಲಿದೆ ಎಂದು ತಿಳಿಸಿದ್ದಾರೆ.
PublicNext
15/11/2020 09:12 am