ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ತುಂಗಳ ಸೊಸೈಟಿಯಿಂದ ಕಳಪೆ ಬೀಜ, ಗೊಬ್ಬರ ಪೂರೈಕೆಯಾಗಿಲ್ಲ

ಅಥಣಿ: ತುಂಗಳ ಸೊಸೈಟಿಯಿಂದ ಯಾವುದೇ ರೀತಿ ಕಳಪೆ ಬೀಜ, ರಸಗೊಬ್ಬರ ಅಥವಾ ಔಷಧಿ ವಿತರಣೆಯಾಗಿಲ್ಲವೆಂದು ಸಂಘದ ಮಾಜಿ ಅಧ್ಯಕ್ಷ ಚಿದಾನಂದ ಬಿರಾದಾರ ಸ್ಪಷ್ಟಪಡಿಸಿದ್ದಾರೆ.

ಅಥಣಿ ತಾಲೂಕಿನ ಕೊಕಟನೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಟ್ಟಟ್ಟಿ ಗ್ರಾಮದ ರೈತ ಮಾಡಿದ ಆರೋಪ ನಿರಾಧಾರ. ರೈತರ ಏಳಿಗೆಯೇ ನಮ್ಮ‌ ಮೊದಲ ಧ್ಯೇಯ, ನಮ್ಮ ಸಂಘಕ್ಕೆ ಕಪ್ಪುಚುಕ್ಕೆ ಬರದೆ ಹಾಗೆ ನಾವು ಕೆಲಸ ಮಾಡುತ್ತಿದ್ದೆವೆ, ರೈತನ ಆರೋಪದಂತೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ ಅದರ ವರದಿ ಶೀಘ್ರ ಬರಲಿದೆ ಎಂದರು.

ಸಂಘದ ನಿರ್ದೇಶಕ ಶೌಕತ್ಅಲಿ ಮುಲ್ಲಾ ಮಾತನಾಡಿ ರೈತನ ಆರೋಪದಂತೆ ಈಗಾಗಲೇ ಕೃಷಿ ಇಲಾಖೆಗೆ ನಾವೂ ಸಹ ದೂರು‌ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ ಎಂದರು.

ಇನ್ನೋರ್ವ ರೈತ ಮುತ್ತಣ್ಣ ಹಿಡಕಲ್ ಮಾತನಾಡಿ‌ ಕಳೆದ 20 ವರ್ಷಗಳಿಂದ ನಾನು ಅದೇ ಸಂಘದ ಗ್ರಾಹಕನಾಗಿದ್ದು ಇಲ್ಲಿಯವರೆಗೆ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಈ ಸಂಘದಿಂದ ಯಾವದೇ ಕಳಪೆ ಬೀಜ ಔಷಧಿ ನೀಡಿದ ಉದಾಹರಣೆ ಇಲ್ಲ ಎಂದರು.

ಈ ವೇಳೆ ಸೋಮರಾಯ ಮಾಳಗೊಂಡ, ಲಕ್ಷ್ಮಣ ಕರೋಶಿ, ಎಸ್ ಎಸ್ ಇಟ್ನಾಳ, ಗಿರೀಶ ಹಳಿಂಗಳಿ, ಎನ್ ವಿ ಮಲಾಬಾದ ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : Nagaraj Tulugeri
PublicNext

PublicNext

21/08/2022 05:57 pm

Cinque Terre

17.27 K

Cinque Terre

0

ಸಂಬಂಧಿತ ಸುದ್ದಿ