ಯಾದಗಿರಿ : ಬೇಸಿಗೆ ಮುಗಿದು ಮುಂಗಾರು ಆರಂಭಗೊಂಡರು ನೀರಿನ ಮೋಟರ್ ಗಳು ದುರಸ್ತಿ ಮಾಡಿ ನೀರು ಬೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ರೈತರು ಧರಣಿ ಕುಳಿತಿದ್ದಾರೆ.
ಅಂದಾಗೆ... ಈ ದೃಶ್ಯ ಕಂಡು ಬಂದಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿರುವ ಗುತ್ತಿಬಸವಣ್ಣ ಏತ ನೀರಾವರಿ ಯೋಜನೆಯ ಮುಂಭಾಗ. ಹೌದು ಟೆಂಟ್ ಹಾಕಿ ಧರಣಿ ಕುಳಿತ ರೈತರು ಸಮಸ್ಯೆ ಬಗೆಹರಿಸುವಂತೆ ಪಟ್ಟು ಹಿಡಿದಿದ್ದಾರೆ.
ಏತ ನೀರಾವರಿ ಯೋಜನೆಯಲ್ಲಿರುವ ಎಲ್ಲಾ ಮೋಟಾರು ಕೆಟ್ಟು ಹಾಳಾಗಿ ಹೋಗಿದ್ದು, ಹೊಸ ಮೋಟರ್ ಅಳವಡಿಸುತ್ತೇವೆ ಎಂದ ಅಧಿಕಾರಿಗಳು 5 ತಿಂಗಳಿನಿಂದ ನಿರ್ಲಕ್ಷವಹಿಸಿದ್ದಾರೆ ಅಂತಾ ರೈತರು ಹೋರಾಟದ ಹಾದಿ ಹಿಡಿದಿದ್ದಾರೆ.
ಮುಂಗಾರು ಆರಂಭವಾಗಿದ್ದು, ಕೂಡಲೇ 8 ನೀರಿನ ಮೋಟರ್ ಗಳು ದುರಸ್ತಿಗೊಳಿಸಿ ನೀರು ಹರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಒಟ್ಟಾರೆ ಕೆಟ್ಟಿರೋ ಮೋಟರ್ ಗಳು ದುರಸ್ತಿ ಮಾಡಿ ನೀರು ಬಿಡುವಂತೆ ಧರಣಿ ಕುಳಿತ ರೈತರಿಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಆಗಮಿಸಿ ಅವರ ಸಮಸ್ಯೆ ಬಗೆಹರಿಸಬೇಕಿದೆ.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
02/06/2022 03:51 pm