ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕೈಗೆ ಬರಬೇಕಿದ್ದ ಗೋವಿನ ಜೋಳ ನೆಲದ ಪಾಲು

ನವಲಗುಂದ : ಸತತವಾಗಿ ಸುರಿಯುತ್ತಿರುವ ಮಳೆಯಿಂದ ಈಗಾಗಲೇ ಅಪಾರ ಪ್ರಮಾಣದ ರೈತರ ಬೆಳೆಗಳು ನಾಶವಾಗಿವೆ. ಅದೇ ರೀತಿ ಮೂರನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಈಗ ತಾಲ್ಲೂಕಿನ ಅಳಗವಾಡಿ ಗ್ರಾಮದ ಜಮೀನಿನಲ್ಲಿ ರಾಶಿ ಹಾಕಲಾಗಿದ್ದ ಗೋವಿನಜೋಳ ಮಳೆಯ ನೀರಿಗೆ ಸಿಲುಕಿ ರೈತನ ಕೈ ಸೇರುವ ಬದಲು ನೆಲದ ಪಾಲಾಗಿದೆ.

ಹೌದು ಗ್ರಾಮದ ದಾದಾಪೀರ್ ನದಾಫ್ ಎಂಬುವವರಿಗೆ ಸೇರಿದ ಸುಮಾರು 30 ಚೀಲದ ಗೋವಿನ ಜೋಳದ ರಾಶಿ ಭಾರಿ ಮಳೆಗೆ ಸಿಲುಕಿ ಕೊಚ್ಚಿ ಹೋಗಿದೆ. ಇದರಿಂದ ಕಂಗಲಾದ ರೈತ ಏನಪ್ಪಾ ಮಾಡೋದು ಅಂತಾ ತಲೆ ಮೇಲೆ ಕೈ ಇಟ್ಟು ಕೂತಿದ್ದಾನೆ. ಇನ್ನು ಇತ್ತ ತಾಲೂಕಾಡಳಿತ ಗಂಭೀರವಾಗಿ ಗಮನ ಹರಿಸಿ, ಪರಿಹಾರ ನೀಡಲು ಮುಂದಾಗಬೇಕಿದೆ.

Edited By : PublicNext Desk
Kshetra Samachara

Kshetra Samachara

19/11/2021 03:19 pm

Cinque Terre

15.37 K

Cinque Terre

2

ಸಂಬಂಧಿತ ಸುದ್ದಿ