ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮಲಪ್ರಭೆಗೆ ನೀರು ಹರಿಸಲು ಸಿ ಎಂ ಗೆ ಮನವಿ

ನವಲಗುಂದ : ಮಹದಾಯಿ ಕಳಸಾ ಬಂಡೂರಿ ಹೋರಾಟಗಾರರು ಬೆಂಗಳೂರಿನ ಗೃಹ ಕಚೇರಿಯ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಅವರು ನೇಗಿಲ ಕೊಡುವ ಮುಖಾಂತರ ಅಭಿನಂದಿಸಿ, ಮಹದಾಯಿ ಕಳಸಾ ಬಂಡೂರಿ ಕಾಮಗಾರಿಯನ್ನು ಕಾನೂನಾತ್ಮಕವಾಗಿ ಏನೇ ಅಡೆತಡೆಗಳು ಇದ್ದರೂ ಸರಿ ಪಡಿಸಿ, ಕೂಡಲೇ ಕೆಲಸ ಪ್ರಾರಂಭ ಮಾಡಿ ನಾಲೆಗಳನ್ನು ಮಲಪ್ರಭೆಗೆ ನೀರು ಹರಿಸಬೇಕೆಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನವಲಗುಂದ ಶಾಸಕ ಹಾಗೂ ಸಚಿವ ಶಂಕರ ಬ ಪಾಟೀಲ ಮುನೇನಕೊಪ್ಪ ಹಾಗೂ ರೈತ ಹೋರಾಟಗಾರರಾದ ಸುಭಾಷ್ ಚಂದ್ರಗೌಡ ಪಾಟೀಲ, ಸಿದ್ದಪ್ಪ ಮುಪ್ಪಯ್ಯನವರ, ಶಿವಣ್ಣ ಹುಬ್ಬಳ್ಳಿ, ಮಲ್ಲಿಕಾರ್ಜುನಗೌಡ ಪಾಟೀಲ, ಯಲ್ಲಪ್ಪ ದಾಡಿಬಾವಿ, ಎನ್ ಎಚ್ ಪಾಟೀಲ, ಭಗವಂತಪ್ಪ ಪುಟ್ಟಣ್ಣವರ, ಎ ಪಿ ಗುರಿಕಾರ, ಸಂಗಪ್ಪ ನಿಡವಣಿ, ಫಕ್ಕೀರಗೌಡ ವೆಂಕನಗೌಡ, ಯಲ್ಲಪ್ಪ ಹೊನ್ನಳ್ಳಿ ,ಈರಪ್ಪ ಕಟಗಿ ಸೇರಿದಂತೆ ಹಲವು ರೈತರು ಇದ್ದರು.

Edited By : PublicNext Desk
Kshetra Samachara

Kshetra Samachara

05/10/2021 10:36 pm

Cinque Terre

10.51 K

Cinque Terre

0

ಸಂಬಂಧಿತ ಸುದ್ದಿ