ನವಲಗುಂದ : ನವಲಗುಂದ ತಾಲೂಕಿನಾದ್ಯಂತ ಸುರಿದ ಮಳೆಗೆ ಈಗಾಗಲೇ ಸಾಕಷ್ಟು ಮನೆಗಳಿಗೆ ಹಾನಿಯುಂಟಾಗಿದೆ. ಹಿನ್ನೆಲೆ ಪಟ್ಟಣದಲ್ಲಿ ನಿರಂತರ ಮಳೆಯಿಂದಾಗಿ ಬಿಳುವಂತ ಅಥವಾ ಶಿಥಿಲಗೊಂಡ ಕಟ್ಟಡದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಪುರಸಭೆ ವತಿಯಿಂದ ಪಟ್ಟಣದಲ್ಲಿ ಪ್ರಕಟಣೆ ಹೊರಡಿಸಲಾಯಿತು.
ಒಂದು ವೇಳೆ ನಿವಾಸಿಗಳೆಲ್ಲದ ಶಿಥಿಲಗೊಂಡ ಅಥವಾ ಬಿಳುವಂತ ಅಪಾಯಕಾರಿ ಕಟ್ಟಡಗಳು ಕಂಡುಬಂದಲ್ಲಿ ಪುರಸಭೆಯ ದೂರವಾಣಿ ಸಂಖ್ಯೆ 08380-229247 ಗೆ ಸಂಪರ್ಕಿಸಲು ಕೋರಲಾಗಿದೆ. ಹಾಗೂ ನಿರಂತರ ಮಳೆಯ ಕಾರಣ ಮನೆಗಳು ಬಿದ್ದು, ಏನಾದರೂ ಅವಘಡಗಳು ಸಂಭವಿಸಿದಲ್ಲಿ ಪುರಸಭೆಗೆ ತಿಳಿಸಲು ಈ ಮೂಲಕ ಮುಖ್ಯಾಧಿಕಾರಿ ವೀರಪ್ಪ ಹಸಬಿ ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪುರಸಭೆ ಮೊಡಲ್ ಆಫೀಸರ ಶ್ರೀ ಬಸವರಾಜ ಎಸ್ ರಾಮಗಿರಿ ಇವರ ದೂರವಾಣಿ ಸಂಖ್ಯೆ 8880035249 ಗೆ ಸಂಪರ್ಕಿಸಲು ತಿಳಿಸಲಾಗಿದೆ.
Kshetra Samachara
21/05/2022 08:47 am