ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಸೂಟಿ ನೇತೃತ್ವದಲ್ಲಿ ಮನೆ ಹಾನಿಗೆ ಪರಿಹಾರ ನೀಡಲು ಮನವಿ

ನವಲಗುಂದ : ಶುಕ್ರವಾರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಅವರ ನೇತೃತ್ವದಲ್ಲಿ ತಾಲ್ಲೂಕಿನ ನಾಗನೂರ ಗ್ರಾಮದಲ್ಲಿ ಹಾನಿಗೋಳಗಾದ ಮನೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ, ತಹಶೀಲ್ದಾರ್ ಗೆ ಮನವಿಯನ್ನು ಸಲ್ಲಿಸಿದರು.

ಗುಡಿಸಾಗರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ನಾಗನೂರ ಗ್ರಾಮದ ಹಳ್ಳಿಕೇರಿ ಪ್ಲಾಟಗಳಲ್ಲಿ ಕನಿಷ್ಠ 100 ಮನೆಗಳು ಇದ್ದು , 275 ಜನರು ಸುಮಾರು 50 ವರ್ಷಗಳಿಂದ ವಾಸವಾಗಿದ್ದಾರೆ.

ಈಗ ಮಳೆಗೆ ಮನೆಗಳು ಹಾನಿಯಾಗಿ ವಾಸಕ್ಕೆ ಯೋಗ್ಯವಾಗದಂತೆ ಆಗಿದೆ. ಪ್ಲಾಟ್ ರಸ್ತೆ ಸಹ ಹದಗೆಟ್ಟಿದ್ದು, ಸಂಚಾರಕ್ಕೆ ದುಸ್ತರವಾಗಿದೆ ಎಂದು ಗುಡಿಸಾಗರ ಗ್ರಾಮ ಪಂಚಾಯತ್ ಪಿ ಡಿ ಓ ಅಧಿಕಾರಿಗಳ ಬಳಿ ಗ್ರಾಮಸ್ಥರು ತಿಳಿಸಿದ್ದಾರೆ. ಕೆರೆ ಇರುವ ಕಾರಣ ನೀಡಿ ಕೆರೆ ಇರುವ ಸ್ಥಳದಲ್ಲಿ ಯಾವದೇ ಸೌಕರ್ಯ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆ ಇಂದು ವಿನೋದ ಅಸೂಟಿ ಅವರ ನೇತೃತ್ವದಲ್ಲಿ ತಹಶೀಲ್ದಾರ್ ನವೀನ ಹುಲ್ಲೂರ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವರ್ಧಮಾನಗೌಡ ಹಿರೇಗೌಡ್ರ, ನವಲಗುಂದ ಪುರಸಭೆ ಅಧ್ಯಕ್ಷ ಮಂಜುನಾಥ್ ಜಾಧವ್, ಆದುಮಸಾಬ್ ಮರಬದ, ಮಕ್ತುಮಸಾಬ್ ಬೆಟಗೇರಿ, ದಾವಲಸಾಬ್ ಒಳ್ಳೆಪ್ಪನವರ, ಇರಪಾಕ್ಷಪ್ಪ ಮಾಕಣ್ಣವರ, ಹನಮಂತಪ್ಪ ಕುರಿ, ಮಕ್ತುಮಸಾಬ್ ಮರಬದ, ಹಸನಸಾಬ ಬೆಟಗೇರಿ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

26/11/2021 10:06 pm

Cinque Terre

10.38 K

Cinque Terre

0

ಸಂಬಂಧಿತ ಸುದ್ದಿ