ನವಲಗುಂದ: ಕಳಸ ಬಂಡೂರಿ ನಾಲಾ ಯೋಜನಾ ಕಾಮಗಾರಿ ಕೂಡಲೇ ಆರಂಭಿಸಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ನಡೆದ ಸರದಿ ಉಪವಾಸಕ್ಕೆ ಸೋಮವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಬೆಂಬಲ ಸೂಚಿಸಿದರು.
ಕಳೆದ ಐದು ದಿನಗಳಿಂದ ರೈತರು ನವಲಗುಂದ ಪಟ್ಟಣದ ರೈತ ಭವನದ ಬಳಿ ಇರುವ ವೀರಗಲ್ಲಿನ ಎದುರು ಹಲವು ಬೇಡಿಕೆಗಳಿಗಾಗಿ ಸರದಿ ಉಪವಾಸ ನಡೆಸುತ್ತಿದ್ದು, ಇಂದು ಈ ಸರದಿ ಉಪವಾಸಕ್ಕೆ ಬೆಳಗಾವಿ ವಿಭಾಗೀಯ ನವಲಗುಂದ ತಾಲ್ಲೂಕು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಬೆಂಬಲ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಲೋಕನಾಥ ಹೆಬಸೂರ, ಈರಣ್ಣ ಸಿಡಗಂಟಿ, ರಾಜು ನಡುವಿನಮನಿ, ಡ್ಯಾಮಣ್ಣ ಹೋನಕುದುರಿ, ಮಾಂತೇಶ ಛಲವಾದಿ, ನಂದಿನಿ ಹಾದಿಮನಿ ಸೇರಿದಂತೆ ರೈತರು ಹಾಗೂ ಹಲವಾರು ಉಪಸ್ಥಿತರಿದ್ದರು.
Kshetra Samachara
25/07/2022 05:41 pm