ಹುಬ್ಬಳ್ಳಿ: ಥೈಲ್ಯಾಂಡ್ ದೇಶದಲ್ಲಿ ನಡೆದಿದ್ದ 2022ನೇ ಸಾಲಿನ ಅಂತಾರಾಷ್ಟ್ರೀಯ ಓಪನ್ ಕರಾಟೆ ಡೂ ಚಾಂಪಿಯನಶಿಪ್‌ನಲ್ಲಿ ನಮ್ಮ ಹುಬ್ಬಳ್ಳಿಯಿಂದ ಕರಾಟೆ ಕ್ರೀಡಾಪಟುಗಳು ಭಾಗವಹಿಸಿ, ಜಯಗಳಿಸಿ ಮರಳಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ದಾರೂಢರ ರೈಲ್ವೆ ನಿಲ್ದಾಣದಲ್ಲಿ ಎಲ್ಲ ಸ್ಪರ್ಧಿಗಳನ್ನು ಶಿವಗಂಗಮ್ಮ ಮಾನಶೆಟ್ಟರ, ಬಸವರಾಜ ಅಳಗವಾಡಿ, ವೀರೇಶ ಅಡವಿಮಠ ಮತ್ತಿತರರು ಸಹಭಾಗಿಯಾಗಿ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದರು.
Kshetra Samachara
06/09/2022 09:27 am