ಹುಬ್ಬಳ್ಳಿ: ಟ್ವಿನ್ ಸಿಟಿ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಕುಸುಗಲ್ ರಸ್ತೆಯ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಫೆ.26ರಂದು ನಡೆಯಲಿರುವ ದಿ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯ ಟ್ರೋಫಿ ಹಾಗೂ ಜರ್ಸಿ ಬಿಡುಗಡೆಯನ್ನು ಇಂದು ಮಾಡಲಾಯಿತು.
ನಗರದ ಪತ್ರಿಕಾ ಭವನದಲ್ಲಿ ಪಂದ್ಯಾವಳಿಯ ಟ್ರೋಫಿ ಹಾಗೂ ಜರ್ಸಿ ಅನಾವರಣಗೊಳಿಸಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಇಮ್ರಾನ್ ಖಾನ್, 'ಶಾಂತಿ, ಸೌಹಾರ್ದತೆ, ಸಹಬಾಳ್ವೆ ಭಾವನೆ ಮೂಡಿಸುವ ಉದ್ದೇಶದಿಂದ ಒಂದು ದಿನದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಫೆಬ್ರವರಿ 26 ರಂದು ಬೆಳಿಗ್ಗೆ 8ರಿಂದ ರಾತ್ರಿ 9 ಗಂಟೆವರೆಗೆ ಪಂದ್ಯಗಳು ನಡೆಯಲಿವೆ. ಹು-ಧಾ ಮಹಾನಗರದ ಒಟ್ಟು 24 ತಂಡಗಳು ಪಂದ್ಯಾವಳಿಗೆ ಹೆಸರು ನೋಂದಾಯಿಸಿಕೊಂಡಿವೆ. ಈ ಪಂದ್ಯಾವಳಿಗೆ ಉದ್ಘಾಟಕರಾಗಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಮಹಾವೀರ ಲಿಂಬ ಸೆಂಟರ್‌ನ ಮುಖ್ಯಸ್ಥ ಮಹೇಂದ್ರ ಸಿಂಘಿ ಆಗಮಿಸಲಿದ್ದಾರೆ' ಎಂದು ಮಾಹಿತಿ ನೀಡಿದರು.
ಇನ್ನು ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 50 ಸಾವಿರ ರೂ. ಹಾಗೂ ಟ್ರೋಫಿ, ಎರಡನೇ ಬಹುಮಾನ 20 ಸಾವಿರ ರೂ. ಹಾಗೂ ಟ್ರೋಫಿ ನೀಡಲಾಗುತ್ತದೆ. ಮ್ಯಾನ್ ಆಫ್ ಸಿರಿಜ್‌ಗೆ 10 ಸಾವಿರ ರೂ. ನೀಡಲಾಗುವುದು. ಪ್ರತಿ ತಂಡಕ್ಕೆ 6,000 ರೂ. ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
Kshetra Samachara
24/02/2022 05:05 pm