ಹುಬ್ಬಳ್ಳಿ: ಉಣಕಲ್ ಪ್ರೀಮಿಯರ್ ಲೀಗ್ (ಯುಪಿಎಲ್)ನ 2ನೇ ಆವೃತ್ತಿಯ ಎರಡನೇ ದಿನವಾದ ಇಂದು ನಡೆದ ಲೀಗ್ ಹಂತದ ನಾಲ್ಕು ಪಂದ್ಯಗಳಲ್ಲಿ ಬ್ಯಾಟರ್‌ಗಳು ರನ್ ಮಳೆ ಸುರಿಸಿದ್ದಾರೆ.
ಪಿಎಸ್ ರಾಯಲ್ ಚಾಲೆಂಜರ್ಸ್ ತಂಡದ ಬ್ಯಾಟರ್ ದೇವರಾಜ್ ಕೋಟಿ 38 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸ್ ಸೇರಿ 68 ರನ್ ಸಿಡಿಸಿದರು. ಅಷ್ಟೇ ಅಲ್ಲದೆ ನಿನ್ನೆ (ಗುರುವಾರ) ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಮಿಂಚಿದ್ದ ಆರ್‌ಸಿ ಸೂಪರ್ ಸ್ಟಾರ್ಸ್ ತಂಡದ ಆಟಗಾರ ಸಂಗಮೇಶ್ ಎಸ್.ಐ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದರು.
ಮೊದಲ ಪಂದ್ಯ:
ಯುಪಿಎಲ್-2 ಟೂರ್ನಿಯ ಎರಡನೇ ದಿನದ ಮೊದಲ ಪಂದ್ಯದಲ್ಲಿ ಲಖನ್ ಡ್ರಾಗನ್ಸ್ ವಿರುದ್ಧ ಆರ್‌ಸಿ ಸೂಪರ್ ಸ್ಟಾರ್ಸ್ ತಂಡವು 18 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿ ಸೂಪರ್ ಸ್ಟಾರ್ಸ್ ನಿಗದಿತ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 88 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಲಖನ್ ಡ್ರಾಗನ್ಸ್ ತಂಡವು 8.1 ಓವರ್‌ಗಳಲ್ಲಿ ಎಲ್ಲಾ 10 ವಿಕೆಟ್ ಕಳೆದುಕೊಂಡು 70 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಈ ಪಂದ್ಯದಲ್ಲಿ ಅದ್ಭುತ ಆಲ್‌ರೌಂಡರ್ ಪ್ರದರ್ಶನ ನೀಡಿದ ಆರ್‌ಸಿ ಸೂಪರ್ ಸ್ಟಾರ್ಸ್ ಸಂಗಮೇಶ್ ಎಸ್.ಐ (ಎರಡನೇ ಬಾರಿಗೆ) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆರ್‌ಸಿ ಸೂಪರ್ ಸ್ಟಾರ್ಸ್ ತಂಡಕ್ಕೆ ಇದು ಎರಡನೇ ಗೆಲುವಾಗಿದರೆ, ಲಖನ್ ಡ್ರಾಗನ್ಸ್ ಎರಡನೇ ಪಂದ್ಯದಲ್ಲೂ ಗೆಲುವಿನ ಖಾತೆ ತೆರೆಯಲು ವಿಫಲವಾಯಿತು.
ಎರಡನೇ ಪಂದ್ಯ:
ಯುಪಿಎಲ್-2 ಟೂರ್ನಿಯ ಎರಡನೇ ದಿನದ ಎರಡನೇ ಪಂದ್ಯದಲ್ಲಿ ಚವಾಣ್ ವಾರಿಯರ್ಸ್ ವಿರುದ್ಧ ಲಯನ್ ಕಿಂಗ್ಸ್ ತಂಡವು 49 ರನ್‌ಗಳಿಂದ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಲಯನ್ ಕಿಂಗ್ಸ್ ತಂಡವು ನಿಗದಿತ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಚವಾಣ್ ವಾರಿಯರ್ಸ್ 9 ವಿಕೆಟ್ ನಷ್ಟಕ್ಕೆ ಕೇವಲ 72 ರನ್ ಗಳಿಸಲು ಶಕ್ತವಾಯಿತು. ಇದರೊಂದಿಗೆ ಲಯನ್ ಕಿಂಗ್ಸ್ ತಂಡವು ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಲಯನ್ ಕಿಂಗ್ಸ್ ಆರ್ಷಫ್ ಪಂದ್ಯ ಶ್ರೇಷ್ಠಕ್ಕೆ ಪಾತ್ರರಾದರು.
ಮೂರನೇ ಪಂದ್ಯ:
ಯುಪಿಎಲ್-2 ಟೂರ್ನಿಯ ಎರಡನೇ ದಿನದ ಮೂರನೇ ಪಂದ್ಯದಲ್ಲಿ ತಾಜ್ ಕ್ರಿಕೆಟ್ ಕ್ಲಬ್ ತಂಡವು ವಿರುದ್ಧ ರಾಯಲ್ ಟೈಗರ್ಸ್ ತಂಡವು 6 ವಿಕೆಟ್‌ಗಳಿಂದ ಅಬ್ಬರದ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ತಾಜ್ ಸಿಸಿ ತಂಡವು ನಿಗದಿತ 10 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಲು ಶಕ್ತವಾಗಿತ್ತು. ಈ ಟಾರ್ಗೆಟ್ ಬೆನ್ನತ್ತಿದ ರಾಯಲ್ ಟೈಗರ್ಸ್ 8.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 86 ರನ್ ಸಿಡಿಸಿ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಯಲ್ ಟೈಗರ್ಸ್ ಉಮರ್ ಅಮ್ಮು (ಎರಡನೇ ಬಾರಿಗೆ) ಪಂದ್ಯ ಶ್ರೇಷ್ಠ ಪಡೆದುಕೊಂಡರು.
ನಾಲ್ಕನೇ ಪಂದ್ಯ:
ಯುಪಿಎಲ್-2 ಟೂರ್ನಿಯ ಎರಡನೇ ದಿನದ ನಾಲ್ಕನೇ ಪಂದ್ಯದಲ್ಲಿ ಬಾಲಾಜಿ ಬ್ಲಾಸ್ಟರ್ಸ್ ವಿರುದ್ಧ ಪಿಎಸ್ ರಾಯಲ್ ಚಾಲೆಂಜರ್ಸ್ ತಂಡವು ಬೃಹತ್ 49 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಿಎಸ್ ರಾಯಲ್ ಚಾಲೆಂಜರ್ಸ್ ನಿಗದಿತ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಲು ಶಕ್ತವಾಗಿತ್ತು. ಈ ಬೃಹತ್ ರನ್ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಬಾಲಾಜಿ ಬ್ಲಾಸ್ಟರ್ಸ್ 6 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿ ಸೋಲಿನೊಂದಿಗೆ ಆಟ ಮುಗಿಸಿತು. ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಪಿಎಸ್ ರಾಯಲ್ ಚಾಲೆಂಜರ್ಸ್ ತಂಡದ ಬ್ಯಾಟರ್ ದೇವರಾಜ್ ಕೋಟಿ ಪಂದ್ಯ ಶ್ರೇಷ್ಠಕ್ಕೆ ಭಾಜನರಾದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/02/2022 09:07 pm