ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಲೀಡ್ ಸ್ಟೋರಿ ತಂಡವು ಈ ವರ್ಷದ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಹೌದು..ರವೀಶ ಪವಾರ ನಾಯಕತ್ವದ ಸಂಯುಕ್ತ ಕರ್ನಾಟಕ ಹಾಗೂ ಧಾರವಾಡ ಪತ್ರಕರ್ತರ ನೇತೃತ್ವದ ಲೀಡ್ ಸ್ಟೋರಿ ತಂಡ ರೋಚಕ ಬ್ಯಾಟಿಂಗ್ ಹಾಗೂ ಉತ್ತಮ ಬೌಲಿಂಗ್ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಉದಯವಾಣಿಯ ಹೆಡಲೈನ್ ತಂಡ ರನ್ನರ್ ಅಫ್ ಆಗಿದೆ.
ಪೈನಲ್ ಪಂದ್ಯದಲ್ಲಿ ಹೆಡಲೈನ್ ಹಾಗೂ ಲೀಡ್ ಸ್ಟೋರಿ ತಂಡದ ಆಟಗಾರರು ಉತ್ತಮ ಪ್ರದರ್ಶನವನ್ನು ನೀಡಿದ್ದು, ಲೀಡ್ ಸ್ಟೋರಿ ತಂಡ ಜಯದ ಮಾಲೆಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ಇನ್ನೂ ಮ್ಯಾನ್ ಆಫ್ ಸಿರೀಸ್ ಪುರಸ್ಕಾರವನ್ನು ಪವರಟಿವಿ ವರದಿಗಾರ ಸುರೇಶ ನಾಯಕ, ಉತ್ತಮ ಬ್ಯಾಟ್ಸ್‌ಮನ್ ಚನ್ನು ಮೂಲಿಮನಿ, ಉತ್ತಮ ಬೌಲರ್ ರವೀಂದ ಹಳಿಜೋಳ ಅವರಿಗೆ ನೀಡಲಾಗಿದ್ದು, 2021-21ನೇ ಸಾಲಿನ ಚಾಂಪಿಯನ್ ಆಗಿ ಲೀಡ್ ಸ್ಟೋರಿ ತಂಡ ವಿಜಯವನ್ನು ಸಾಧಿಸಿದೆ.
Kshetra Samachara
12/01/2022 06:39 pm