ಕಲಘಟಗಿ: ತಾಲೂಕಿನ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿ ರವೀಂದ್ರ ಅಲ್ಲಾಪುರ
ರಾಜ್ಯ ಮಟ್ಟದ ಸರ್ಕಾರಿ ನೌಕರರ ಪುರುಷರ ಕ್ರೀಡಾಕೂಟದಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಮಾಡಿ ಕಲಘಟಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ದಾವಣಗೆರೆಯಲ್ಲಿ ಶನಿವಾರ ಜರುಗಿದ 67 ಕೆಜಿ ವಿಭಾಗದ ಕುಸ್ತಿ ಯಲ್ಲಿ ಧಾರವಾಡ ಜಿಲ್ಲಾ ಪ್ರತಿನಿಧಿಯಾಗಿ ಭಾಗವಹಿಸಿದ ರವೀಂದ್ರ ಅಲ್ಲಾಪುರ ಚಿಕ್ಕಮಂಗಳೂರಿನ ಶಿಕ್ಷಣ ಇಲಾಖೆಯ ಮಂಜಪ್ಪ ಕಣಿವೇಹಳ್ಳಿ ಅವರನ್ನು ಸೋಲಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.
ರವೀಂದ್ರ ಕಲಘಟಗಿ ತಾಲೂಕಿನ ಉಗ್ಗಿನಕೇರಿ ಗ್ರಾಮದ ರಾಮಣ್ಣ ಅಲ್ಲಾಪುರ ಅವರ ಪುತ್ರರಾಗಿದ್ದು,ಸದ್ಯ ಕುರುವಿನಕೊಪ್ಪ ಗ್ರಾಮ ಪಂಚಾಯತಿ ಗ್ರೇಡ್ 2 ಕಾರ್ಯದರ್ಶಿಯಾಗಿ,ಕಲಘಟಗಿ ತಾಲೂಕಾ ಪಂಚಾಯತಿಗೆ ನಿಯೋಜನೆ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ.ರವೀಂದ್ರ
ಕಳೆದ ವರ್ಷ ಸಹ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದು ಸಾಧನೆ ಮಾಡಿದ್ದರು.
Kshetra Samachara
25/10/2021 01:20 pm