ನವಲಗುಂದ : ಪಂಜಾಬ್ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸುತ್ತಲೇ ನವಲಗುಂದದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಂಭ್ರಮಿಸಿದರು.
ಆರ್ ರನ್ ಗಳ ಮೂಲಕ ಗೆಲುವು ಸಾಧಿಸಿದ ಆರ್ ಸಿ ಬಿ ತಂಡ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದ್ದು, ನವಲಗುಂದದಲ್ಲಿ ಅಭಿಮಾನಿಗಳ ಹರ್ಷ ಮುಗಿಲು ಮುಟ್ಟಿತ್ತು. ಈ ಹಿನ್ನೆಲೆ ಆರ್ ಸಿ ಬಿ ಅಭಿಮಾನಿಗಳು ಪಟಾಕಿ ಹೊಡೆದು, ಕುಣಿದು ಕುಪ್ಪಳಿಸಿ, ಕೇಕೆ ಹಾಕಿ ಸಂಭ್ರಮಿಸಿದರು.
Kshetra Samachara
03/10/2021 08:52 pm